ಮಂಜೇಶ್ವರ ಚುನಾವಣಾ ತಕರಾರು: ಅರ್ಜಿ ದೋಷಮುಕ್ತಗೊಳಿಸಿದ್ದು ಪುರಾವೆಗಳು ಇಲ್ಲದ ಕಾರಣದಿಂದ-ಕೆ. ಸುರೇಂದ್ರನ್
ಮಂಜೇಶ್ವರ: ಚುನಾವಣಾ ತಕರಾರು ಪ್ರಕರಣದ ಆರೋಪಿಗಳಾಗಿ ಹೆಸರಿಸಿದವರನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಸೂಕ್ತ ಪುರಾವೆಗಳು ಇಲ್ಲದ ಕಾರಣದಿಂದಾಗಿಯೇ ದೋಷಮುಕ್ತಿಗೊಳಿದೆಯೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಈ ತೀರ್ಪಿನ ಬಗ್ಗೆ ಯುಡಿಎಫ್ ಮತ್ತು ಕೆಲವು ಮಾಧ್ಯಮಗಳು ತನ್ನ ವಿರುದ್ಧ ಪ್ರಚಾರ ನಡೆಸುತ್ತಿದೆ. ಪ್ರೋಸಿಕ್ಯೂಶನ್ ಮತ್ತು ಪೊಲೀಸ್ ಪರಸ್ಪರ ಸಹಾಯ ಮಾಡಿದ್ದಾರೆಂದು ಯುಡಿಎಫ್ ಆರೋಪಿಸುತ್ತಿದೆ. ಆದರೆ ಪುರಾವೆಗಳ ಅಭಾವದಿಂದ ನ್ಯಾಯಾಲಯ ಮಂಜೇಶ್ವರ ಚುನಾವಣಾ ತಕರಾರು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದ್ದ ಎಲ್ಲರನ್ನೂ ದೋಷಮುಕ್ತಿಗೊಳಿದೆಯೆಂದು ಅವರು ಹೇಳಿದ್ದಾರೆ.
ಇ.ಪಿ. ಜಯರಾಜನ್ ಕೊಲೆಯತ್ನ ಪ್ರಕರಣದಲ್ಲಿ ಕೆ. ಸುಧಾಕರನ್ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದಾಗ ಅದರ ವಿರುದ್ಧ ಬಿಜೆಪಿ ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಆದರೆ ಮಂಜೇಶ್ವರ ಪ್ರಕರಣದಲ್ಲಿ ಬಿಜೆಪಿಗೆ ಅನುಕೂಲಕರವಾದ ತೀರ್ಪು ಉಂಟಾದಾಗ ಅದು ಬಿಜೆಪಿ ಮತ್ತು ಸಿಪಿಎಂನ ಹೊಂದಾಣಿಕೆಯಿಂದಲೇ ಆಗಿದೆಯೆಂದು ಕಾಂಗ್ರೆಸ್ ಹೇಳುತ್ತಿರುವುದು ಇಬ್ಬಗೆ ನೀತಿಯಾಗಿದೆಯೆಂದು ಸುರೇಂದ್ರನ್ ಹೇಳಿದ್ದಾರೆ.