ಮಂಜೇಶ್ವರ ಬ್ಲೋಕ್ ಪಂ. ರಿಸೋರ್ಸ್ ಸೆಂಟರ್ ಉದ್ಘಾಟನೆ

ಮಂಜೇಶ್ವರ: ಕಿಲದ ನೇತೃತ್ವದಲ್ಲಿ ಕೇಂದ್ರದ ಯೋಜನೆಯಾದ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ (ಆರ್. ಜಿ.ಎಸ್.ಎ) ಅಂಗವಾಗಿ ನಿರ್ಮಿಸಿದ ಮಂಜೇಶ್ವರ ಬ್ಲೋಕ್ ಪಂಚಾಯತ್ ರಿಸೋರ್ಸ್ ಸೆಂಟರ್‌ನ ಕಚೇರಿ ಉದ್ಘಾಟನೆಯನ್ನು ಕಿಲ ಡೈರೆಕ್ಟರ್ ಜನರಲ್ ಡಾ. ಜೋಯ್ ಇಳಮನ್ ನಿರ್ವಹಿ ಸಿದರು. ಎಂ. ಪ್ಲೋಯೆಬಿಲಿಟಿ ಸೆಂಟರ್, ತ್ಯಾಜ್ಯ ನಿರ್ಮೂಲನೆ ಚಟುವಟಿಕೆಗಳು, ತರಬೇತಿ ಸಹಿತ ಹಲವು ಯೋಜನೆಗಳು ಈ ಕೇಂದ್ರದ ಅಡಿಯಲ್ಲಿ ಕಾರ್ಯಾಚರಿಸ ಲಿದೆ. ಬ್ಲೋಕ್ ಪಂ. ಅಧ್ಯಕ್ಷೆ ಶಮೀನ ಟೀಚರ್ ಅಧ್ಯಕ್ಷತೆ ವಹಿಸಿದರು. ಅಜಯನ್ ಪನಯಾಲ್ ಸೆಂಟರ್‌ನ ಮಾಹಿತಿ ನೀಡಿದರು. ಬ್ಲೋಕ್ ಪಂ.ನ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ವಿವಿಧ ಪಂ.ಗಳ ಅಧ್ಯಕ್ಷರಾದ ಜೀನ್ ಲವಿನಾ ಮೊಂತೇರೋ,  ಸುಂದರಿ ಆರ್. ಶೆಟ್ಟಿ, ಕೆ. ಜಯಂತಿ, ಉಪಾಧ್ಯಕ್ಷರು, ಜನಪ್ರತಿನಿಧಿಗಳು ಸಹಿತ ಹಲವರು ಭಾಗವಹಿಸಿದರು.

You cannot copy contents of this page