ಮಂಜೇಶ್ವರ ಶ್ರೀ ಗಣೇಶೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಹೊಸಂಗಡಿ: ಮಂಜೇಶ್ವರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ರೋಹಿದಾಸ್ ಎಸ್ ಬಂಗೇರ, ಅಧ್ಯಕ್ಷರಾಗಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಗಾಣಿಂಜಾಲ್, ಕೋಶಾಧಿಕಾರಿಯಾಗಿ ನರೇಂದ್ರ ಹೆಗಡೆ ಆಯ್ಕೆಯಾದರು. ನವೀನ್‌ರಾಜ್ ಕೆ.ಜೆ ಅಧ್ಯಕ್ಷತೆ ವಹಿಸಿದರು. ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷ ಪದ್ಮನಾಭ ಕಡಪ್ಪುರ, ಅರ್ಚಕ ತಿರುಮಲೇಶ ಆಚಾರ್ಯ, ಹರೀಶ್ ಶೆಟ್ಟಿ ಮಾಡ ಉಪಸ್ಥಿತರಿದ್ದರು. ಅವಿನಾಶ್ ಸ್ವಾಗತಿಸಿ, ಹರೀಶ್ ಶೆಟ್ಟಿ ವಂದಿಸಿದರು.  ಸೆಪ್ಟಂಬರ್ ೭ರಿಂದ ೧೦ರ ವರಗೆ ಗಣೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

You cannot copy contents of this page