ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬಿ.ಎಂ. ಅನಂತ ನಿಧನ

ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬಿ.ಎಂ. ಅನಂತ (90) ನಿಧನಹೊಂದಿದರು.  ಕಳೆದ 25 ವರ್ಷಗಳಿಂದ ಅಧ್ಯಕ್ಷರಾಗಿದ್ದ ಇವರು ಬ್ಯಾಂಕ್‌ನ ಆಡಳಿತ ನಿರ್ದೇಶಕರಾಗಿ ದುಡಿದಿದ್ದು, ಬ್ಯಾಂಕ್‌ನ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.  ಇಂದು ಬೆಳಿಗ್ಗೆ 6 ಗಂಟೆಗೆ  ಮಂಜೇಶ್ವರ ಎರಡನೇ ರೈಲ್ವೇ ಗೇಟ್ ಬಳಿಯ ಸ್ವ-ಗೃಹ ಅಕ್ಷಯ ನಿಲಯದಲ್ಲಿ ನಿಧನಹೊಂದಿದ್ದಾರೆ. 

ಮೃತರು ಮಕ್ಕಳಾದ ಹರ್ಷ, ರಾಹುಲ್, ಸೊಸೆ ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಮೀರಾ, ಸೊಸೆ ಗೀತಾ ಈ ಹಿಂದೆ ನಿಧನರಾಗಿದ್ದಾರೆ. ಬಿ.ಎಂ. ಅನಂತರವರು ಕಾಸರಗೋಡು ಜಿಲ್ಲಾ ಕೈಗಾರಿಕಾ ಇಲಾಖೆಯಲ್ಲಿ ಜನರಲ್ ಮೆನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಂಜೇಶ್ವರ ಪಂಚಾಯತ್‌ನ ಕೀರ್ತೇಶ್ವರ ವಾರ್ಡ್ ಸದಸ್ಯ, ಸಿಪಿಐ ಮಂಡಲ ಕಾರ್ಯದರ್ಶಿ, ಸಿಪಿಐ ಜಿಲ್ಲಾ ಸಮಿತಿ ಸದಸ್ಯ, ಡಾ. ಸುಬ್ಬರಾವ್ ಸಚಿವರಾಗಿದ್ದಾಗ ಅವರ ಪರ್ಸನಲ್ ಸೆಕ್ರೆಟರಿಯಾಗಿಯೂ ಸೇವೆ ಸಲ್ಲಿಸಿದ್ದರು.

ನಿಧನಕ್ಕೆ ಸಿಪಿಐ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ಮಂಜೇಶ್ವರ ಮಂಡಲ ಸಮಿತಿ, ಲೋಕಲ್ ಸಮಿತಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿ, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್. ಜಯಾನಂದ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page