ಮಕರಸಂಕ್ರಮಣ ಪೂಜೆ 14ರಂದು

ಶಬರಿಮಲೆ: ಶಬರಿಮಲೆಯಲ್ಲಿ ಮಕರಸಂಕ್ರಮಣ ಪೂಜೆ ಜನವರಿ 14ರಂದು ರಾತ್ರಿ 8.55ಕ್ಕೆ ನಡೆಯ ಲಿದೆ. ಇದರ ಪೂರ್ವಭಾವಿ ಯಾಗಿ 12ರಂದು ಸಂಜೆ ೫ಕ್ಕೆ ತಂತ್ರಿವರ್ಯ ಕಂಠರರ್ ಬ್ರಹ್ಮದತ್ತನ್‌ರ ಕಾರ್ಮಿ ಕತ್ವದಲ್ಲಿ ಪ್ರಸಾದ ಶುದ್ಧಿ, 13ರಂದು ಬಿಂಬಶುದ್ಧಿ ಕ್ರಿಯೆ ನಡೆಯಲಿ ರುವುದು. ಇದೇ ವೇಳೆ ಮಕರ ಸಂಕ್ರಮಣ ಪೂಜೆಗೆ ದಿನಗಳು ಸಮೀಪಿಸುತ್ತಿದ್ದಂತೆ ಸನ್ನಿಧಾನದಲ್ಲಿ ತೀರ್ಥಾಟಕರ ಸಂದಣಿ ಹೆಚ್ಚುತ್ತಿರು ವುದು ಕಂಡು ಬರುತ್ತಿದೆ. ಪ್ರಸ್ತುತ ದಿನಂಪ್ರತಿ ಒಂದು ಲಕ್ಷದಷ್ಟು ತೀರ್ಥಾಟಕರು ಸನ್ನಿಧಾನಕ್ಕೆ ತಲುಪಿ ದೇವರ ದರ್ಶನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಹೆಚ್ಚು ತೀರ್ಥಾಟಕರು ತಲುಪಲಿ ದ್ದಾರೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಆದ್ದರಿಂದ ಅವರನ್ನು ನಿಯಂತ್ರಿಸಲು ಬೇಕಾದ ಕ್ರಮ ಆರಂಭಿಸಲಾಗಿದೆ.

ಕಾಡು ದಾರಿ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವು ದರಿಂದ ಕರಿಮಲೆಯಲ್ಲಿ ಸರಕಾರಿ ಡಿಸ್ಪೆನ್ಸರಿ ಆರಂಭಿಸಲಾಗಿದೆ. ಸನ್ನಿಧಾನ ಹಾಗೂ ಪರಿಸರ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಮಕರಜ್ಯೋತಿ ಉತ್ಸವಕಾಲದ ಪ್ರಮುಖ ಕಾರ್ಯಕ್ರಮವಾದ ಕಳ ಬರೆಯುವಿಕೆ 14ರಂದು ಆರಂಭ ಗೊಳ್ಳಲಿದೆ. ೧೪ರಂದು ಬಾಲಕನಾದ ಮಣಿಕಂಠ, 15ರಂದು ವಿಲ್ಲಾಳಿವೀರ, 16ರಂದು ರಾಜಕುಮಾರ, 17ರಂದು ಹುಲಿ ಮೇಲೆ ಕುಳಿತ ಅಯ್ಯಪ್ಪ, 18ರಂದು ತಿರುವಾಭರಣ ಧರಿಸಿದ ಅಯ್ಯಪ್ಪ ಎಂಬೀ ರೀತಿಯಲ್ಲಿ ಕಳಬರೆಯಲಾಗುವುದು.

Leave a Reply

Your email address will not be published. Required fields are marked *

You cannot copy content of this page