ಮಣಿಯಂಪಾರೆ-ಕುರೆಡ್ಕ ರಸ್ತೆಯ ಕಾಮಗಾರಿಗೆ ಚಾಲನೆ
ಮಣಿಯಂಪಾರೆ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಸೇರಿಸಿ ನಿರ್ಮಿಸುವ ಮಂಜೇಶ್ವರ ಬ್ಲೋಕ್‌ನ ಎಣ್ಮಕಜೆ ಪುತ್ತಿಗೆ ಪಂಚಾಯತ್‌ಗಳ ೯.೬೭೩ ಕಿಲೋ ಮೀಟರ್ ಉದ್ದದ ಮಣಿಯಂಪಾರೆ- ದೇರಡ್ಕ-ಶಿರಿಯ-ಕುರಡ್ಕ ರಸ್ತೆಯ ಕಾಮಗಾರಿಗೆ ಮಣಿಯಂಪಾರೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಚಾಲನೆ ನೀಡಿದರು.
ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್ ಸ್ವಾಗತಿಸಿದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಬ್ಲೋಕ್ ಪಂಚಾಯತ್ ಸದಸ್ಯರಾದ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ.ಪಿ, ಪಂ. ಸದಸ್ಯರಾದ ಆಸಿಫ್ ಅಲಿ, ಸೌದಾಬಿ ಹನೀಫ, ಉಷಾ ಕುಮಾರಿ, ಪಾಲಾಕ್ಷ ರೈ, ಪ್ರೇಮ ಎಸ್, ಬಿ.ಎಸ್. ಗಾಂಭೀರ್, ರಾಧಾಕೃಷ್ಣ ನಾಯ್ಕ್ ಭಾಗವಹಿಸಿದರು.