ಮಣ್ಣಂಗುಳಿಯಲ್ಲಿ ಕ್ರೀಡಾಕೂಟ: ಮಧ್ಯೆ ವಿದ್ಯಾರ್ಥಿಗಳ ಘರ್ಷಣೆ
ಉಪ್ಪಳ: ಮಣ್ಣಂಗುಳಿ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಶಾಲಾ ಕ್ರೀಡಾಕೂಟದ ವೇಳೆ ಎರಡು ತಂಡ ವಿದ್ಯಾರ್ಥಿಗಳು ಪರಸ್ಪ ಹೊಡೆದಾಡಿಕೊಂಡ ಘಟನೆ ನಡೆದಿದೆ. ಮೂರು ದಿನಗಳ ಕ್ರೀಡಾಕೂಟ ನಿನ್ನೆ ಸಮಾಪ್ತಿಗೊಂ ಡಿತು. ಕ್ರೀಡಾಕೂಟದ ಎರಡನೆ ದಿನವಾದ ಗುರುವಾರ ವಿದ್ಯಾರ್ಥಿಗಳು ವಿನಾ ಕಾರಣ ಹೊಡೆದಾಡಿಕೊಂ ಡಿದ್ದರು. ವಿಷಯ ತಿಳಿದು ತಲುಪಿದ ಪೊಲೀಸರು ತಂಡಗಳನ್ನು ಚದುರಿಸಿ ದ್ದರು. ಅಲ್ಲದೆ ಡಿವೈಎಸ್ಪಿ ತಲುಪಿ ವಿದ್ಯಾರ್ಥಿಗಳಿಗೆ ತಾಕೀತು ನೀಡಿದ್ದರು. ಅದರ ಬೆನ್ನಲ್ಲೇ ನಿನ್ನೆ ಮಧ್ಯಾಹ್ನವೂ ವಿದ್ಯಾರ್ಥಿಗಳೊಳಗೆ ಮತ್ತೆ ಹೊಡೆದಾಟ ನಡೆದಿದೆ.
ವಿದ್ಯಾರ್ಥಿಯೋರ್ವನನ್ನು ತಂಡವೊಂದು ಕೈಕಂಬ ರಸ್ತೆಯಲ್ಲಿ ಓಡಿಸಿ ಬೆತ್ತದಿಂದ ಹೊಡೆಯುವ ದೃಶ್ಯದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದೇ ವೇಳೆ ಹಲ್ಲೆಯಿಂದ ವಿದ್ಯಾರ್ಥಿಯೋರ್ವ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಹೊಡೆದಾಟ ಬಗ್ಗೆ ಯಾರೂ ದೂರು ನೀಡದ ಹಿನ್ನಲೆಯಲ್ಲಿ ಯಾವುದೇ ಕೇಸು ದಾಖಲಿಸಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.