ಮದುವೆ ಅಗತ್ಯಕ್ಕಾಗಿ ಕಾರು ಪಡೆದು ಹಿಂತಿರುಗಿಸದ ದೂರಿನಂತೆ ಕೇಸು ದಾಖಲು

ಕಾಸರಗೋಡು: ಮದುವೆಯ ಅಗತ್ಯಕ್ಕಾಗಿ ಕಾರು ಪಡೆದು ಬಳಿಕ ಅದನ್ನು ಹಿಂತಿರುಗಿಸದ ದೂರಿನಂತೆ ವಿದ್ಯಾನಗರ ಪೊಲೀಸರು ಆಲಂಪಾ ಡಿಯ ಹೈದರ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಚೆಂಗಳ ಇಂದಿರಾನಗರದ ಮಹರೂಫ್ ಎಂಬವರು ಈ ಬಗ್ಗೆ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮದುವೆ ಅಗತ್ಯಕ್ಕಾಗಿ ಹೈದರ್ ಕಳೆದ ನವಂಬರ್ ೯ರಂದು ತನ್ನ ಕಾರು ಪಡೆದುಕೊಂಡಿದ್ದರೆಂದೂ ಬಳಿಕ ಅದನ್ನು ಆತ ಹಿಂತಿರುಗಿಸಿಲ್ಲವೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲ್ಲಿ ಮಹರೂಫ್  ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page