ಮದುವೆ ಸಿದ್ಧತೆಯಲ್ಲಿದ್ದ ಯುವಕ ನೇಣು ಬಿಗಿದು ಸಾವು
ಮಂಜೇಶ್ವರ: ಮದುವೆ ಸಿದ್ಧತೆಯಲ್ಲಿದ್ದ ಯುವಕನೋರ್ವ ನೇಣುಬಿಗಿದು ಸಾವಿಗೀಡಾದ ಘಟನೆ ನಡೆದಿದೆ. ಮೀಂಜ ಪಂಚಾಯತ್ ವ್ಯಾಪ್ತಿಯ ಬೆಜ್ಜ ಐಎಚ್‌ಡಿಪಿ ಕಾಲನಿ ನಿವಾಸಿ ತನಿಯಪ್ಪರ ಪುತ್ರ ಅಜಿತ್ ಕುಮಾರ್ (28) ಎಂಬವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ನಿನ್ನೆ ಬೆಳಿಗ್ಗೆ ಮನೆ ಮಂದಿ ಮದುವೆಯ ಕಾರ್ಯಕ್ರಮಗಳಿಗೆ ಸಾಮಗ್ರಿ ತರಲು ಹೊಸಂಗಡಿ ಪೇಟೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ದೊಡ್ಡಮ್ಮ ಮಾತ್ರ ಇದ್ದು ಅವರು ಊಟ ಮಾಡಿ ಮಲಗಿದ್ದರು. ಅಪರಾಹ್ನ ೩ ಗಂಟೆ ವೇಳೆ ಅಜಿತ್ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಸಿಪಿಐ ಸಕ್ರಿಯ ಕಾರ್ಯಕರ್ತ ಹಾಗೂ ಎಐವೈಎಫ್ ಬೆಜ್ಜ ಯೂನಿಟ್ ಕಾರ್ಯದರ್ಶಿ ಯಾದ ಅಜಿತ್ ಕುಮಾರ್ ಮಜಿಬೈಲು ಸೇವಾ ಸಹಕಾರಿ ಬ್ಯಾಂಕ್‌ನ ಉಪ್ಪಳ ಭಗವತೀ ಶಾಖೆಯಲ್ಲಿ ಕಳೆದ ೬ ವರ್ಷಗಳಿಂದ ರಾತ್ರಿ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಜಿತ್‌ಗೆ ಹೊಸಂಗಡಿ ಬಳಿಯ ಅಂಗಡಿಪದವು ನಿವಾಸಿ ಯುವತಿಯೋರ್ವೆ ಜೊತೆ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಫೆ. ೨ರಂದು ಐಲ ಶ್ರೀ ದುರ್ಗಾಪರ ಮೇಶ್ವರೀ ಕ್ಷೇತ್ರದಲ್ಲಿ ವಿವಾಹ ನಡೆದು ಅಪರಾಹ್ನ ಮಂಜೇಶ್ವರ ಕಲಾಸ್ಪರ್ಶಂ ಸಭಾಂಗಣದಲ್ಲಿ ಔತಣ ಕೂಟ ನಡೆಸು ವುದಾಗಿ ನಿರ್ಧರಿಸಲಾಗಿತ್ತು. ಮದುವೆ ಆಮಂತ್ರಣ ಪತ್ರ ಸಂಬಂಧಿಕರಿಗೆ, ಸ್ನೇಹಿತರಿಗೆ ವಿತರಿಸಲಾಗಿದೆ. ಮದುವೆಗೆ ಇನ್ನು ಕೇವಲ ಒಂದು ವಾರವಿದ್ದು, ಆದರೆ ಇದೀಗ ಅಜಿತ್ ಕುಮಾರ್ ನೇಣು ಬಿಗಿದು ಸಾವಿಗೀಡಾಗಲು ಕಾರಣವೇನೆಂದು ತಿಳಿದುಬಂದಿಲ್ಲ.
ಮೃತರು ತಂದೆ, ಸಹೋದರ-ಸಹೋದರಿಯರಾದ ಜೀತ್ ಕುಮಾರ್, ಹೇಮಂತ್, ವಿದ್ಯಾಶ್ರೀ, ವೀಣಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಾಯಿ ಸುಶೀಲ ಈ ಹಿಂದೆ ನಿಧನರಾಗಿದ್ದಾರೆ. ಅಜಿತ್‌ರ ಸಾವಿನ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ದ್ದಾರೆ. ಇಂದು ಮರಣೋತ್ತರ ಪರೀಕ್ಷೆ ನಡೆಯಲಿದ.