ಮದ್ಯ ವಶ: ಪರಾರಿಯಾದ ಆರೋಪಿ ಸೆರೆ

ಕುಂಬಳೆ: ಅಬಕಾರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಓರ್ವನನ್ನು ಬಂಧಿಸಲಾಗಿದೆ. ಬಾಯಾರು ಕನಿಯಾಲ್ತಡ್ಕದ ಸಂತೋಷ್ ಕೆ. (37) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಮಾರ್ಚ್ 12ರಂದು ಅಬಕಾರಿ ಅಧಿಕಾರಿಗಳು ಕನಿಯಾಲ್ತಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೪.೩ ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿತ್ತು. ಈ ವೇಳೆ ಆರೋಪಿ ಸಂತೋಷ್ ಓಡಿ ಪರಾರಿಯಾಗಿದ್ದನು. ಈತನನ್ನು ನಿನ್ನೆ ಕುಂಬಳೆ ರೇಂಜ್ ಅಬಕಾರಿ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದ ತಂಡ ಬಂಧಿಸಿದೆ.

Leave a Reply

Your email address will not be published. Required fields are marked *

You cannot copy content of this page