ಮದ್ರಸ ವಿದ್ಯಾರ್ಥಿನಿಗೆ ಚಿನ್ನದ ಉಂಗುರ ನೀಡಿ ಕಿರುಕುಳ: ಉಸ್ತಾದ್‌ಗೆ 187 ವರ್ಷ ಕಠಿಣ ಸಜೆ

ಕಣ್ಣೂರು: ಹದಿನಾರರ ಹರೆಯದ ಮದ್ರಸ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯಾದ ಉಸ್ತಾದ್‌ಗೆ ನ್ಯಾಯಾಲಯ 187 ವರ್ಷ ಸಜೆ ಹಾಗೂ 9 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಆಲಕ್ಕೋಡು ನಿವಾಸಿಯಾದ ಮುಹಮ್ಮದ್ ರಾಫಿ (37) ಎಂಬಾತನಿಗೆ ತಳಿಪರಂಬ ಕ್ಷಿಪ್ರ ಪೋಕ್ಸೋ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಕಣ್ಣೂರು ಪಳಯಂಗಾಡಿಗೆ ಸಮೀಪ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. 16ರ ಹರೆಯದ ವಿದ್ಯಾರ್ಥಿನಿಗೆ ಚಿನ್ನದ ಉಂಗುರ ನೀಡಿ  ಆಕೆಯನ್ನು ಪುಸಲಾಯಿಸಿ ವಶೀಕರಿಸಿದ ಬಳಿಕ 2020ರಿಂದ 2021ರವರೆಗೆ ಕಿರುಕುಳ ನೀಡಿರುವುದಾಗಿ ಕೇಸು ದಾಖಲಿಸಲಾಗಿತ್ತು. ವಳಪಟ್ಟಣಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಬೇರೊಂದು ಪೋಕ್ಸೋ ಪ್ರಕರಣದಲ್ಲಿ ಸೆರೆಗೀಡಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಮುಹಮ್ಮದ್ ರಾಫಿ ಪಳಯಂಗಾಡಿಯಲ್ಲಿ ನಡೆದ ಪ್ರಕರಣದಲ್ಲಿ ಈತ ಸೆರೆಗೀಡಾಗಿದ್ದನು.

RELATED NEWS

You cannot copy contents of this page