ಮಧೂರು ಕ್ಷೇತ್ರದ ಮೂಡಪ್ಪ ಸೇವೆ: ಅಕ್ಕಿ ಉತ್ಪಾದನೆಗೆ ಏರಿಕ್ಕಳ ಬಯಲಿನಲ್ಲಿ ಬಿತ್ತನೆ
ಮಧೂರು: ಇಲ್ಲಿನ ಶ್ರೀ ಮದ ನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂಗ ವಾಗಿ ಮೂಡಪ್ಪ ಸೇವೆಗೆ ಅಗತ್ಯ ವಿರುವ ಅಕ್ಕಿ ಉತ್ಪಾದಿಸುವುದಕ್ಕೆ ಬೇಕಾಗಿ ಏರಿಕ್ಕಳ ನಾಗವನದ ಬಳಿಯ ಬಯಲಿನಲ್ಲಿ ಭತ್ತ ಕೃಷಿಗೆ ಚಾಲನೆ ನೀಡಲಾಯಿತು. ಕಾರ್ಯ ಕ್ರಮವನ್ನು ಮಧೂರು ಕ್ಷೇತ್ರ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಬಿತ್ತನೆ ನಡೆಸ ಲಾಗಿದೆ. ಗೌರವಾಧ್ಯಕ್ಷ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಮೊಕ್ತೇಸರ ಕೆ.ಕೆ. ಶೆಟ್ಟಿ ಬಿತ್ತನೆ ನಡೆಸಿ ಉದ್ಘಾಟಿಸಿದರು. ಸಮಿತಿ ಸದಸ್ಯರಾದ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ಗಿರೀಶ್ ಸಂಧ್ಯಾ, ಶೀನ ಶೆಟ್ಟಿ, ಮಾದರಿ ಕೃಷಿಕ ಅಶೋಕ ಆಳ್ವ ಭಾಗವಹಿಸಿದರು. ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆ 2025 ಮಾರ್ಚ್ 27ರಿಂದ ಎಪ್ರಿಲ್ 7ರವರೆಗೆ ನಡೆಯಲಿದೆ.