ಮಧೂರು ಕ್ಷೇತ್ರ ಜಾತ್ರೆ: ಅವಭೃತ ನಾಳೆ

ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಮಹೋತ್ಸವ ನಾಳೆ ಸಮಾಪ್ತಿಯಾಗಲಿದೆ. ಕಳೆದ 13ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಜಾತ್ರೆ ನಡೆಯುತ್ತಿದೆ. ಇಂದು ರಾತ್ರಿ 7ಕ್ಕೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕಕ್ಕೆ ದೇವರ ಶೋಭಾಯಾತ್ರೆ ನಡೆಯಲಿದೆ. ಈ ವೇಳೆ ವೀರಮಾರುತಿ ವ್ಯಾಯಾಮಶಾಲೆಯವರಿಂದ ತಾಲೀಮು ಪ್ರದರ್ಶನ ನಡೆಯಲಿದೆ. 10 ಗಂಟೆಗೆ ಮಧೂರು ಬೆಡಿ ಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಿಕ ಸುಡುಮದ್ದು ಪ್ರದರ್ಶನ, 12.30ಕ್ಕೆ ಶಯನ ಕವಾಟಬಂಧನ ನಡೆಯಲಿದೆ.
ನಾಳೆ ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ರಾತ್ರಿ 8ಕ್ಕೆ ಉತ್ಸವ ಬಲಿ, 10ಕ್ಕೆ ಅವಭೃತ ಸ್ನಾನ, ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆಯಲಿದೆ.

You cannot copy contents of this page