ಮಧೂರು: ಶ್ರೀ ಅಮೃತಕೃಪಾನಂದಪುರಿ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ; ಶ್ರೀ ರಾಜಶೇಖರಾನಂದ ಸ್ವಾಮೀಜಿ ಸಂಜೆ ಆಗಮನ
ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮಗಳು ಸಂಭ್ರಮದಿAದ ಮುಂದುವರಿಯುತ್ತಿದ್ದು, ಊರ-ಪರವೂರ ಸಹಸ್ರಾರು ಮಂದಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿ ದ್ದಾರೆ. ಈಗಾಗಲೇ ಸ್ವಾಮೀಜಿಯವರು, ಗಣ್ಯರು ಸಹಿತ ಹಲವರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಮಲೆಯಾಳ ಚಲನಚಿತ್ರ ರಂಗದ ಖ್ಯಾತ ನಟ ಪದ್ಮಶ್ರೀ ಜಯರಾಂ, ಕೊಲ್ಲಂ ಮಾತಾ ಅಮೃತಾನಂದಮಯಿ ಮಠದ ಶ್ರೀ ಅಮೃತ ಕೃಪಾನಂದಪುರಿ ಸ್ವಾಮೀಜಿಯವರು ಇಂದು ಬೆಳಿಗ್ಗೆ ಕ್ಷೇತ್ರಕ್ಕೆ ಆಗಮಿಸಿದರು.
ವೈದಿಕ ಕಾರ್ಯಕ್ರಮದಂಗವಾಗಿ ಇಂದು ಬೆಳಿಗ್ಗೆ ದೀಪದ ಬಲಿ, ದರ್ಶನಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನಡೆಯಿತು. ಮಹಾ ಮೂಡಪ್ಪ ಸೇವೆಯ ದ್ರವ್ಯಗಳ ಆಗಮನವಾಗಿದ್ದು, ಬಳಿಕ ದ್ರವ್ಯಪೂಜೆ ನಡೆಯಿತು.
ಸಂಜೆ 6ಕ್ಕೆ ಉತ್ಸವಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ. ಇಂದು ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಅಮೃತ ಕೃಪಾನಂದಪುರಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಹಲವರು ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ 12.30ಕ್ಕೆ ಶ್ರೀ ಮಧ್ವಾಧೀಶ ವಿಠಲದಾಸ್ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ದಾಸಭಕ್ತಿ ಸಂಕೀರ್ತನೆ, 2 ಗಂಟೆಗೆ ವಿದುಷಿ ವಾಣಿ ಪ್ರಸಾದ್ ಬದಿಯಡ್ಕ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ. ಸಂಜೆ 4 ಗಂಟೆಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯ ವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 4.30ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ, ವಿಟ್ಲ ಅರಮನೆಯ ಬಂಗಾರ ಅರಸರು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಗೌರವ ಉಪಸ್ಥಿತರಿರುವರು. ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಮಾಜಿ ಸಂಘಟನಾ ಕಾರ್ಯದರ್ಶಿ ಎಂ. ಶ್ರೀಧರನ್ ನಂಬೂದಿರಿ ಪ್ರಧಾನ ಭಾಷಣ ಮಾಡುವರು. ಕಾರವಾರದ ನ್ಯಾಯಮೂರ್ತಿ ಧನರಾಜ್ ಎಸ್.ಎನ್ ಮುಖ್ಯ ಅತಿಥಿಯಾಗಿರುವರು.ಹಲವಾರು ಗಣ್ಯರು ಉಪಸ್ಥಿತರಿರುವರು. ರಾತ್ರಿ 7.30ರಿಂದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪುತ್ತೂರು ಅವರಿಂದ ಭರತನಾಟ್ಯ,9ಕ್ಕೆ ಪುತ್ತೂರು ಜಗದೀಶ್ ಆಚಾರ್ಯಮತ್ತು ಬಳಗ ದಿಂದ ಭಕ್ತಿಗಾನ ರಸಮಂಜರಿ, ವೇದಿಕೆ 3ರಲ್ಲಿ ಸಂಜೆ 6.30ಕ್ಕೆ ಶ್ರೀ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ‘ಸಾಮ್ರಾಜ್ಞಿ’ ಪ್ರದರ್ಶನಗೊಳ್ಳಲಿದೆ.