ಮನೆಯಲ್ಲಿ ಕಳವು: 16 ವರ್ಷಗಳ ಬಳಿಕ ಆರೋಪಿ ಸೆರೆ
ಕಾಸರಗೋಡು: ಮನೆಗೆ ನುಗ್ಗಿ ನಗ-ನಗದು ಕಳವುಗೈದ ಪ್ರಕರಣದ ಆರೋ ಪಿಯನ್ನು ಕಳವು ನಡೆದ 16 ವರ್ಷಗಳ ಬಳಿಕ ಕಾಸರಗೋಡು ಪೊಲೀಸ್ ಠಾಣೆ ಎಸ್ಐ ಪಿ.ಪಿ. ಅಖಿಲ್ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ವಯನಾಡು ಪನಮರಂ ಕುಳಿ ವಯಲ್ ಚೆರುವಟ್ಟೂರು ಕಡಶ್ಶೇರಿ ವೀಟಿಲ್ ರಶೀದ್ (38) ಬಂಧಿತನಾದ ಆರೋಪಿ. 2006 ಅಕ್ಟೋಬರ್ 18ರಂದು ಕಾಸರಗೋಡು ತಳಂಗರೆ ಖಾಝಿಲೈನಿನ ಪಿ.ಎ. ತಾಜುದ್ದೀನ್ ಎಂಬವರ ಬೀಗ ಜಡಿದ ಮನೆಗೆ ನುಗ್ಗಿ ಅಲ್ಲಿಂದ ಮೂರು ಪವನ್ನ ಚಿನ್ನದ ಒಡವೆ ಮತ್ತು 25,000 ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿ ಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ರಶೀದ್ನನ್ನು ಬೇರೊಂದು ಪ್ರಕರಣದಲ್ಲಿ ವಯನಾಡ್ ಪನಮರಂ ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿ ದಾಗ ತಳಂಗರೆಯ ಮನೆಯಲ್ಲಿ ಕಳವು ನಡೆಸಿದ ಮಾಹಿತಿಯೂ ಪೊಲೀಸರಿಗೆ ಲಭಿಸಿತ್ತು. ನಂತರ ಅಲ್ಲಿನ ಪೊಲೀಸರು ಆತನನ್ನು ಮಾನಂತವಾಡಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು.