ಮನೆಯವರನ್ನು ದಿಗ್ಬಂಧನದಲ್ಲಿರಿಸಿ ಮಂಗಳೂರಿನಲ್ಲಿ ದರೋಡೆ ಕಾಸರಗೋಡು ನಿವಾಸಿಗಳ ಸಹಿತ 10 ಮಂದಿ ಸೆರೆ
ಮಂಗಳೂರು: ಮಂಗಳೂರು ರೂರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ಎಂಬವರ ಕುಳಾಯಿಬೆಟ್ಟು ಎಂಬಲ್ಲಿನ ಮನೆಯಲ್ಲಿ ಕಳವು ನಡೆಸಿದ ಘಟನೆಗೆ ಸಂಬಂಧಿಸಿ ಕಾಸರಗೋಡು ನಿವಾಸಿಗಳ ಸಹಿತ 10 ಮಂದಿಯನ್ನು ಬಂಧಿಸಲಾಗಿದೆ. ಕಾಸರಗೋಡು ನಿವಾಸಿ ಸಕೀರ್ ಹುಸೈನ್ (56), ಉಪ್ಪಳ ನಿವಾಸಿ ಬಾಲಕೃಷ್ಣ, ತೃಶೂರು ನಿವಾಸಿ ವಿನೋಜ್ (38), ಕುಮಾರ ನೆಲ್ಲೂರು ನಿವಾಸಿ ಸಜೀಶ್ ಎಂ.ಎಂ. (32), ಶಿಜೋ ದೇವಸಿ (38), ತಿರುವನಂತ ಪುರ ಪೋತ್ತನ್‌ಕಾಡ್ ನಿವಾಸಿ ಜೋನ್ ಬೋಸ್ಕೋ ಬಿಜು ಜಿ. (41), ಸತೀಶ್ ಬಾಬು (44), ನೀರ್ಮಾರ್ಗದ ವಸಂತ್ ಕುಮಾರ್(42), ರಮೇಶ್ ಪೂಜಾರಿ (42), ರೈಮಂಡ್ ಡಿಸೋಜಾ (47) ಎಂಬಿವರನ್ನು ಬಂಧಿಸಲಾಗಿದೆ. ಜೂನ್ 21ರಂದು ಮುಖವಾಡ ಧರಿಸಿ ತಲುಪಿದ ಆರೋಪಿಗಳು ಮನೆಗೆ ಅತಿಕ್ರಮಿಸಿ ನುಗ್ಗಿ ಗುತ್ತಿಗೆ ದಾರ ಪದ್ಮನಾಭ,ಅವರ ಪತ್ನಿ ಹಾಗೂ ಮಕ್ಕಳನ್ನು ದಿಗ್ಬಂಧನದಲ್ಲಿರಿಸಿ ಬೆದರಿಕೆಯೊಡ್ಡಿ 9 ಲಕ್ಷ ರೂಪಾಯಿ ಹಾಗೂ ಆಭರಣಗಳನ್ನು ದರೋಡೆ ನಡೆಸಿದ್ದರು. ದರೋಡೆ ಯತ್ನವನ್ನು ತಡೆಯಲು ಯತ್ನಿಸಿದ ಪದ್ಮನಾಭರಿಗೆ ತಂಡ ಹಲ್ಲೆಗೈದಿತ್ತು. ಈ ಮನೆಯಿಂದ ತಂಡ ಅಪಹರಿಸಿದ ಇನ್ನೋವಾ ಕಾರನ್ನು ದಾರಿ ಮಧ್ಯೆ ಉಪೇಕ್ಷಿಸಲಾ ಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಲಾರಿ ಚಾಲಕನಾಗಿ ಗುತ್ತಿಗೆದಾರನ ಅಧೀನದಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಗ್ರಾಮ ಪಂಚಾಯತ್ ಸದಸ್ಯನೂ ಆಗಿರುವ ವಸಂತ ಪೂಜಾರಿ ಈ ದರೋಡೆಯ ಸೂತ್ರಧಾರನೆನ್ನಲಾಗಿದೆ. ಈ ಹಿಂದೆ ಕಳವು ನಡೆಸಿ ಅನುಭವವುಳ್ಳ ವಸಂತ್, ರಮೇಶ್, ರೈಮಂಡ್, ಬಾಲ ಕೃಷ್ಣ ಎಂಬಿವರು ಸೇರಿ ಈ ದರೋಡೆಗೆ ಯೋಜನೆ ರೂಪಿಸಿದ್ದರು. 8 ತಿಂಗಳ ಹಿಂದೆ ಇದಕ್ಕೆ ಯೋಜನೆ ಹಾಕಲಾ ಗಿತ್ತು. ಗುತ್ತಿಗೆದಾರನ ಕೈಯಲ್ಲಿ 100ರಿಂದ 300 ಕೋಟಿ ರೂಪಾಯಿವರೆಗೆ ಇದೆ ಎಂದೂ, ಕೇರಳ ಮೂಲದ ಆರೋಪಿಗಳಿಗೆ ಸೂತ್ರಧಾರ ತಿಳಿಸಿದ್ದನು. ದರೋಡೆಗೆ ನಾಲ್ಕು ದಿನಗಳ ಹಿಂದೆ ತಂಡ ಮಂಗಳೂರಿಗೆ ತಲುಪಿ ಹೋಟೆಲ್‌ನಲ್ಲಿ ತಂಗಿತ್ತು.
ಜೂನ್ 18ರಂದು ದರೋಡೆಗೆ ತಲುಪಿದ್ದರೂ ಅದು ಯಶಸ್ವಿಯಾಗಿ ರಲಿಲ್ಲ. ಅನಂತರ 21ರಂದು ತಲುಪಿ ತಂಡ ದರೋಡೆ ಕೃತ್ಯ ನಡೆಸಿದೆ. ದರೋಡೆ ಸಮಯದಲ್ಲಿ ಈ ತಂಡದ ಎಲ್ಲರೂ ಹಿಂದಿ ಭಾಷೆಯಲ್ಲಿ ಮಾತನಾ ಡಿದ್ದರು. ಈ ದರೋಡೆ ಪ್ರಕರಣದಲ್ಲಿ ಆರೋಪಿಗಳ ಕುರಿತು ಯಾವುದೇ ಸುಳಿವು ಲಭಿಸಿರದ ಹಿನ್ನೆಲೆಯಲ್ಲಿ ಆರೋಪಿ ಗಳನ್ನು ಸೆರೆ ಹಿಡಿಯಲು ಪೊಲೀಸರ ಮೂರು ತಂಡವನ್ನು ರೂಪೀಕರಿಸ ಲಾಗಿತ್ತೆಂದು ಸಿಟಿ ಪೊಲೀಸ್ ಸಮೀಷನರ್ ನೂಪ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.