ಮನೆಯಿಂದ ಚಿನ್ನದ ಸರ ಕದ್ದ ಪ್ರಕರಣ: ಆರೋಪಿ ಬಂಧನ

ಕಾಸರಗೋಡು: ಮನೆಯಿಂದ ಚಿನ್ನದ ಸರ ಕದ್ದ ಪ್ರಕರಣದ ಆರೋಪಿಯಾದ ಮಹಿಳೆಯನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಚೆರ್ವತ್ತೂರು ತುರುತ್ತಿ ಅಸೈನಾರ್ ಮುಕ್ ನಿವಾಸಿ ಬಿಂದು ಕೆ (44) ಬಂಧಿತ ಆರೋಪಿ.

ಎಪ್ರಿಲ್ ೨೭ರಂದು ಚೆರ್ವತ್ತೂರು ಪಯಂಗಿ  ನಿವಾಸಿಯ ಮನೆಯಿಂದ ಕಪಾಟಿನೊಳಗಿನಿಂದ 3.5 ಪವನ್‌ನ ಚಿನ್ನದ ಒಡವೆ ಕದ್ದ ಪ್ರಕರಣಕ್ಕೆ ಸಂಬಂ ಧಿಸಿ ಈಕೆಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆ ಕಳವು ನಡೆದ ಮನೆಯವರ ಸಂಬಂಧಿಕೆಯಾಗಿದ್ದಾಳೆ. 

ಮನೆಯ ಕೀಲಿ ಗೊಂಚಲನ್ನು ಉಪಯೋಗಿಸಿ ಆರೋಪಿ ಈ ಕಳವು ನಡೆಸಿದ್ದಳು.  ಆ ವೇಳೆ ಮನೆಯವರು  ಸಂಬಂಧಿಕರ  ಮರಣಾನಂತರದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಆ ಸಮಯ ನೋಡಿ ಆರೋಪಿ  ಕಳವು ನಡೆಸಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳವು ನಡೆದ ಮನೆ ಬಳಿಯ ಸಿಸಿ ಟಿವಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಅದರ ಜಾಡು ಹಿಡಿದು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಹೊಸದುರ್ಗ ಡಿವೈಎಸ್ಪಿ ಬಾಬು ಪೆರಿಂಙೋತ್‌ರ ಮೇಲ್ನೋಟದಲ್ಲಿ ಚಂದೇರಾ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಶಾಂತ್ ಎಂ, ಎಸ್‌ಐ ಸತೀಶ್ ಕೆ.ಪಿ, ಎನ್‌ಸಿಪಿಒ ಹರೀಶ್, ಸುಧೀಶ್, ರಂಜಿತ್, ಜಿತಿನ್ ಎಂಬಿವರನ್ನೊಳಗೊಂಡ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.

RELATED NEWS

You cannot copy contents of this page