ಮನೆಯಿಂದ 3 ಕ್ವಿಂಟಾಲ್ ಅಡಿಕೆ ಕಳವು
ಉಪ್ಪಳ: ಕುಟುಂಬ ಮನೆಗೆ ಬೀಗ ಜಡಿದು ಹೊರಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಮೂರು ಕ್ವಿಂಟಾಲ್ ಅಡಿಕೆ ಕಳವುಗೈದ ಬಗ್ಗೆ ದೂರಲಾಗಿದೆ. ಕೋಡಿಜಾಲು ಕೊಡ್ಲಮೊಗರುವಿನ ಲೋಕೇಶ ರೈ ಎಂಬವರ ಮನೆಯಿಂದ ಅಡಿಕೆ ಕಳವಿಗೀಡಾಗಿದೆ. ಲೋಕೇಶ್ ರೈ ಕುಟುಂಬ ಸಮೇತ ಮಾರ್ಚ್ 21ರಂದು ಹೊರಗೆ ತೆರಳಿ 24ರಂದು ಮರಳಿ ಬಂದಿದ್ದಾರೆ. ಈ ವೇಳೆ ಮನೆಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಒಳಗೆ ಪ್ರವೇಶಿಸಿ ನೋಡಿದಾಗ ಅಡಿಕೆ ಕಳವುಗೈದಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಲೋಕೇಶ್ ರೈ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.