ಮನೆಯ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಬಿ.ಎಂ.ಎಸ್ ನೇತಾರ, ಆಟೋ ರಿಕ್ಷಾ ಚಾಲಕ ಮೃತ್ಯು
ಉಪ್ಪಳ: ಮನೆಯ ಮಹಡಿ ಯಿಂದ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಆಟೋ ರಿಕ್ಷಾ ಚಾಲಕ ಮೃತ ಪಟ್ಟರು. ಕುಬಣೂರು ನಿವಾಸಿ ಬಂ ದ್ಯೋಡಿನಲ್ಲಿ ಕಳೆದ ೩೦ ವರ್ಷ ಗಳಿಂದ ಆಟೋ ರಿಕ್ಷಾ ಚಾಲಕನಾ ಗಿದ್ದ ಪದ್ಮನಾಭ (೫೦) ಮೃತಪಟ್ಟ ದುರ್ದೈವಿ. ಇವರು ಗುರುವಾರ ಸಂಜೆ ಕುಬಣೂರು ಪರಿಸರದ ನಿರ್ಮಾಣ ಹಂತದಲ್ಲಿರುವ ಮನೆಗೆ ಗ್ರಿಲ್ಸ್ ನಿರ್ಮಾಣಕ್ಕೆ ಕಾರ್ಮಿಕರನ್ನು ಕರೆದೊಯ್ದಿದ್ದರು. ಅಲ್ಲಿ ಮೇಲಂತಸ್ತಿನಲ್ಲಿ ಕಾರ್ಮಿಕರ ಜೊತೆ ಅಳತೆ ತೆಗೆಯಲು ಸಹಕರಿಸುತ್ತಿದ್ದ ವೇಳೆ ಪದ್ಮನಾಭ ಆಯತಪ್ಪಿ ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಮೃತಪಟ್ಟರು. ಇವರು ಬಿ.ಎಂ.ಎಸ್ ಮಂಗಲ್ಪಾಡಿ ಪಂಚಾಯ ತ್ ಸಮಿತಿಯ ಜತೆ ಕಾರ್ಯದರ್ಶಿ, ಬಿ.ಎಂ.ಎಸ್ ಬಂದ್ಯೋಡು ಆಟೋ ರಿಕ್ಷಾ ಸ್ಟಾಂಡ್ ಯೂನಿಟ್ ಅಧ್ಯಕ್ಷ ಹಾಗೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಕುಬಣೂರು ಶ್ರೀರಾಮ ಎಯುಪಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರೂ, ಸಮಾಜ ಸೇವಕರೂ ಆಗಿದ್ದರು.
ಇವರ ನಿಧನದಿಂದ ಬಂ ದ್ಯೋಡು ಸಹಿತ ಪರಿಸರ ಪ್ರದೇಶದಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ನಿನ್ನೆ ರಾತ್ರಿ ಚೆರುಗೋಳಿ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.
ರಾಮ ಬೆಳ್ಚಪ್ಪಾಡ-ದಿ| ವಸಂತಿ ದಂಪತಿಯ ಪುತ್ರನಾದ ಮೃತರು ಪತ್ನಿ ಸುಜಾತ, ಮಕ್ಕಳಾದ ಅಮೃತ, ಆದರ್ಶ್, ಸಹೋದರ ನಾಗೇಶ, ಸಹೋದರಿಯರಾದ ಪವಿತ್ರ, ಮಲ್ಲಿಕ, ಸುಗಂಧಿ, ಸುಜಾತ ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿ ದ್ದಾರೆ.