ಮನೆ ಅಂಗಳದಲ್ಲಿದ್ದ ವೃದ್ಧೆ ಬೀದಿನಾಯಿಗಳ ದಾಳಿಗೆ ಬಲಿ

ಆಲಪ್ಪುಳ: ಮನೆ ಅಂಗಳದಲ್ಲಿದ್ದ ವೃದ್ಧೆಯನ್ನು ಬೀದಿ ನಾಯಿಗಳು ಕಡಿದು ಕೊಂದ ಘಟನೆ ನಡೆದಿದೆ. ತಗಳಿ ಅರಯಾನ್‌ಚಿರ ಅಳಿಕ್ಕೋಡ್ ನಗರದಲ್ಲಿ ಈ ಘಟನೆ ನಡೆದಿದ್ದು, ಕಾರ್ತ್ಯಾಯಿನಿ (81) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ.

ನಿನ್ನೆ ಹಾಡಹಗಲೇ ಈ ಘಟನೆ ನಡೆದಿದೆ. ವಲಿಯಾಳಿಕ್ಕಾಲ್ ಎಂಬಲ್ಲಿನ ಪುತ್ರನ ಮನೆಗೆ ತೆರಳಿದ್ದ ಕಾರ್ತ್ಯಾಯಿನಿ ಅಂಗಳದಲ್ಲಿ  ನಿಂತಿದ್ದ ವೇಳೆ ಬೀದಿ ನಾಯಿಗಳು ಅವರ ಮೇಲೆ ದಾಳಿ ನಡೆಸಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹೊರಗೆ ತೆರಳಿದ್ದ ಪುತ್ರ ಪ್ರಕಾಶನ್ ಹಾಗೂ ಸೊಸೆ ಜೂಲಿಯ ಸಂಜೆ ೪ ಗಂಟೆಗೆ ಮರಳಿ ಬಂದಾಗ  ಅಂಗಳದಲ್ಲಿ ಬಿದ್ದಿದ್ದ ಕಾರ್ತ್ಯಾಯಿನಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವುದು ಕಂಡುಬಂದಿದೆ. ಕೂಡಲೇ ನಾಯಿ ಗಳನ್ನು ಓಡಿಸಿ ಕಾರ್ತ್ಯಾಯಿನಿಯನ್ನು ಆಸ್ಪತ್ರೆಗೆ .ಕೊಂಡೊಯ್ಯುತ್ತಿದ್ದಂತೆ ಅವರು ಮೃತಪಟ್ಟರು. ದಿ| ಶ್ರೀಧರನ್ ಎಂಬವರ ಪತ್ನಿಯಾದ ಮೃತರು ನಾಲ್ಕು ಮಕ್ಕಳು,ಸೊಸೆಯಂದಿರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page