ಮನೆ ಬೆಂಕಿಗಾಹುತಿಯಾಗಿ ದಂಪತಿ ಮೃತ್ಯು: ಪುತ್ರ ನಾಪತ್ತೆ
ಆಲಪ್ಪುಳ: ಮನೆ ಬೆಂಕಿಹಾಗುತಿ ಯಾಗಿ ವೃದ್ದ ದಂಪತಿ ಸಾವಿಗೀಡಾದ ಘಟನೆ ಮಾನ್ನಾರ್ ಎಂಬಲ್ಲಿ ನಡೆದಿದೆ. ಚೆನ್ನಿತ್ತಲ ಕೋಟ್ಟಮುರಿ ಕೊಟ್ಟೋಟ್ ನಿವಾಸಿ ರಾಘವನ್ (92), ಪತ್ನಿ ಭಾರತಿ (90) ಎಂಬಿವರು ಮೃತಪಟ್ಟವ ರಾಗಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ. ಮನೆಯಲ್ಲಿ ಈ ದಂಪತಿ ಮಾತ್ರವೇ ವಾಸಿಸುತ್ತಿದ್ದಾರೆ. ಓರ್ವ ಮಗ ವಿಜಯನ್ ದೂರದಲ್ಲಿದ್ದು, ಹಲವು ದಿನಗಳಿಗೊಮ್ಮೆ ಬರುತ್ತಿದ್ದಾನೆ. ನಿನ್ನೆ ರಾತ್ರಿ ಮಗನೂ ಮನೆಯಲ್ಲಿದ್ದನು ಎಂದು ಹೇಳಲಾಗುತ್ತಿದೆ. ಆದರೆ ದುರ್ಘಟನೆ ಬಳಿಕ ಮಗ ನಾಪತ್ತೆ ಯಾಗಿದ್ದಾನೆ. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಘಟನೆಯಲ್ಲಿ ನಿಗೂಢತೆಗಳಿವೆಯೆಂದು ಹೇಳಲಾಗು ತ್ತಿದೆ. ಇಂದು ಮುಂಜಾನೆ ಮನೆ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು.
ಪೊಲೀಸರು ತಲುಪುವುದರೊಳಗೆ ದಂಪತಿ ಮೃತಪಟ್ಟಿದ್ದರು. ಮನೆಯಲ್ಲಿ ಆಸ್ತಿ ಸಂಬಂಧ ತರ್ಕ ಉಂಟಾಗಿತ್ತೆಂದೂ ಇತ್ತೀಚೆಗೆ ರಾಘವನ್ ಮೇಲೆ ಪುತ್ರ ಹಲ್ಲೆಗೈದು ಕೈಗೆ ಗಾಯಗೊಳಿಸಿ ದ್ದನೆನ್ನಲಾಗಿದೆ. ಈ ಬಗ್ಗೆ ರಾಘವನ್ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಇಂದು ಬೆಳಿಗ್ಗೆ ಠಾಣೆಗೆ ಬರುವಂತೆ ಪೊಲೀಸರು ವಿಜಯನ್‌ಗೆ ತಿಳಿಸಿದ್ದರೆಂದು ಹೇಳಲಾಗುತ್ತಿದೆ. ಈ ಮಧ್ಯೆ ಮನೆ ಬೆಂಕಿಗಾಹುತಿಯಾಗಿ ದಂಪತಿ ಮೃತಪಟ್ಟ ಘಟನೆ ನಡೆದಿದೆ.