ಮರ ಮುರಿಯುವ ವೇಳೆ ರೆಂಬೆ ಬಿದ್ದು ಯುವಕ ಮೃತ್ಯು
ಕಣ್ಣೂರು: ಇಲ್ಲಿನ ಉದಯಗಿರಿ ಚೀಕಾಡ್ ನಿವಾಸಿ ಎ.ಎನ್. ಸುರೇಶ್ ಕುಮಾರ್ (48) ಮರ ಮುರಿದು ತೆಗೆ ಯುವ ವೇಳೆ ಉಂಟಾದ ದುರಂತದಲ್ಲಿ ಮೃತಪಟ್ಟಿದ್ದಾರೆ. ಮಣಕ್ಕಡವ್ ಪಿ.ಕೆ. ಸ್ಟೋರ್ ಮಾಲಕ ಹಾಗೂ ಪೇಟೆಯಲ್ಲಿ ಪಿಕಪ್ ವ್ಯಾನ್ ಚಾಲಕರಾಗಿದ್ದಾರೆ. ನಿನ್ನೆ ಮಧ್ಯಾಹ್ನ ದುರಂತ ಸಂಭವಿಸಿದೆ. ಗೆಳೆಯ ಟಿ.ಎಸ್. ಸಂತೋಷ್ ಕುಮಾರ್‌ನ ಜೊತೆ ಚೀಕಾಡ್‌ನಲ್ಲಿ ಮರ ಮುರಿದು ತೆಗೆಯುತ್ತಿದ್ದ ಮಧ್ಯೆ ರೆಂಬೆ ಸುರೇಶ್‌ರ ದೇಹಕ್ಕೆ ಬಿದ್ದಿದೆ. ಗಾಯಗೊಂಡ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಸಾವು ಸಂಭವಿಸಿದೆ. ಮಣಕ್ಕಡವಿನ ಮನೆ ಹಿತ್ತಿಲಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ ಅಜಿತ, ಮಕ್ಕಳಾದ ಅಂಜು, ಅರ್ಜುನ್, ಅಶ್ವಿನಿ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.