ಮಲೆನಾಡು ಹೆದ್ದಾರಿಯಲ್ಲಿ ರಾಜ್ಯ ಸಾರಿಗೆ ಬಸ್ ಆರಂಭಿಸಲು ಡಿಫಿ ಮನವಿ

ಕಾಸರಗೋಡು: ವರ್ಕಾಡಿ ನಂದರಪದವು ಮೂಲಕ ಮುಡಿಪು ವರೆಗೆ ಮಲೆನಾಡು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮಂಜೂರು ಮಾಡಬೇಕೆಂದು ಡಿವೈಎಫ್‌ಐ ಮಂಜೇಶ್ವರ ಬ್ಲೋಕ್ ಸಮಿತಿ ಆಗ್ರಹಿಸಿದೆ. ನಿತ್ಯವೂ ನೂರಾರು ಮಂದಿ ಸಂಚರಿಸುವ ಈ ರಸ್ತೆಯಲ್ಲಿ ರಾಜ್ಯ ಸಾರಿಗೆ ಬಸ್ ಸಂಚರಿಸದಿರುವುದು ಸಮಸ್ಯೆ ತಂದಿಟ್ಟಿದೆ. ಮಧೂರು, ಪುತ್ತಿಗೆ, ಪೈವಳಿಕೆ, ಮೀಂಜ, ವರ್ಕಾಡಿ ಪಂಚಾಯತ್‌ನ ಜನರಿಗೆ ಸಾರಿಗೆ ಬಸ್ ಆರಂಭಗೊಂಡರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ನೂರಾರು ಮಂದಿ ಉದ್ಯೋಗ, ಶಿಕ್ಷಣಕ್ಕಾಗಿ ವಿವಿಧ ವ್ಯವಹಾರಗಳಿಗೆ ಈ ರಸ್ತೆ ಮೂಲಕ ಸಂಚರಿಸುತ್ತಿದ್ದು, ಶೀಘ್ರವೇ ರಾಜ್ಯ ಸಾರಿಗೆ ಬಸ್ ಈ ರಸ್ತೆ ಮೂಲಕ ಆರಂಭಗೊಳಿಸಬೇಕೆಂದು ಡಿವೈಎಫ್‌ಐ ಆಗ್ರಹಿಸಿದೆ. ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಸಾರಿಗೆ ಇಲಾಖೆ ಸಚಿವ ಗಣೇಶ್ ಕುಮಾರ್‌ರವರ ಖಾಸಗಿ ಕಾರ್ಯದರ್ಶಿ ಅಜಿತ್ ಕುಮಾರ್‌ಗೆ ಡಿಫಿ ಮನವಿ ನೀಡಿದೆ. ಬ್ಲೋಕ್ ಸಮಿತಿ ಅಧ್ಯಕ್ಷ ವಿನಯಕುಮಾರ್ ಬಾಯಾರು ಮನವಿ ಸಲ್ಲಿಸಿದ್ದು, ಪೈವಳಿಕೆ ವಿಲ್ಲೇಜ್ ಸಮಿತಿ ಅಧ್ಯಕ್ಷ ಮಹೇಶ್ ಕುಮಾರ್ ಜೊತೆಗಿದ್ದರು.

You cannot copy contents of this page