ಮಳೆಗಾಲ ಕುಂಡುಕೊಳಕೆ ಪ್ರದೇಶದ ಕುಟುಂಬಗಳಿಗೆ ಸಂಕಟ ಕಾಲ: ಮನೆಯೊಳಗೆ ನೀರು ತುಂಬಿ ಸಮಸ್ಯೆ
ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ೨೦ ನೇ ವಾರ್ಡ್ ಕುಂಡುಕೊಳಕೆ ಪ್ರದೇಶದಲ್ಲಿ ಪ್ರತಿವರ್ಷ ಮಳೆ ನೀರು ಮನೆಯೊಳಗೆ ನುಗ್ಗು ತ್ತಿದ್ದು, ಇದಕ್ಕೆ ಈ ತನಕ ಯಾವುದೇ ಪರಿಹಾರವನ್ನು ಕಾಣಲು ಸಾಧ್ಯವಾಗದೇ ಇರುವುದು ಇಲ್ಲಿಯ ಜನತೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇಲ್ಲಿನ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮಳೆಗಾಲದಲ್ಲಿ ಇಲ್ಲಿನ ಬಹುತೇಕ ಮನೆಗಳಿಗೆ ನೀರು ನುಗ್ಗುತ್ತದೆ. ಇದರಿಂದ ಅನೇಕರು ಮನೆ ಬಿಟ್ಟು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ತಗ್ಗು ಪ್ರದೇಶವಾಗಿ ರುವುದರಿಂದ ಜೋರು ಮಳೆಯಾದರೆ ಹಿತ್ತಲಿಗೆ ನೀರಿನ ಜೊತೆ ಕೆಸರು ಕೂಡಾ ಬಂದು ಸೇರುತ್ತದೆ. ಈ ರೀತಿ ಒಮ್ಮೆ ನೀರು ನುಗ್ಗಿದರೆ ಅದು ಒಣಗಲು ಬಹಳ ದಿನಗಳೇ ಬೇಕಾಗುತ್ತದೆ. ಅಷ್ಟರ ತನಕವೂ ಅಂಗಳದಲ್ಲಿರುವ ಕೆಸರನ್ನು ತುಳಿದುಕೊಂಡೇ ಮನೆಯೊಳಗೆ ಬರಬೇಕಾಗುತ್ತದೆ. ಕೊಳಚೆ ನೀರು ಕಟ್ಟಿ ನಿಲ್ಲುವುದರಿಂದ ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ. ತ್ಯಾಜ್ಯ ತುಂಬಿರುವ ರೈಲ್ವೇ ಚರಂಡಿ ಹಾಗೂ ರೈಲ್ವೇ ಹಳಿಯ ಸಮೀಪದಲ್ಲಿರುವ ಚರಂಡಿಯಲ್ಲಿ ತುಂಬಿರುವ ತ್ಯಾಜ್ಯಗಳನ್ನು ಸಂದರ್ಭ ಕ್ಕನುಸಾರವಾಗಿ ಶುಚೀಕರಿಸದ ಕಾರಣ ಮಳೆಗಾಲದಲ್ಲಿ ಈ ಪರಿಸರದ ಜನತೆಗೆ ಸಂಕಷ್ಟವನ್ನು ಎದುರಿಸುವಂ ತಾಗಿದೆ. ಕೆಲ ದಿನಗಳ ಹಿಂದೆ ಬ್ಲಾಕ್ ಪಂ. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಮುತುವರ್ಜಿ ವಹಿಸಿ ಈ ಪರಿಸರದ ತ್ಯಾಜ್ಯವನ್ನು ಒಮ್ಮೆ ತೆರವುಗೊಳಿಸಲಾಗಿತ್ತು. ಪ್ರತಿಯೊಂದು ಮಳೆಗಾಲದಲ್ಲೂ ಇಲ್ಲಿಯ ಕುಟುಂಬ ಮನೆ ಉಪೇಕ್ಷಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಸಂಬAಧಪಟ್ಟವರು ಇದಕ್ಕೊಂದು ಪರಿಹಾರ ಕಾಣ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.