ಮಹಿಳಾ ಕಾಂಗ್ರೆಸ್‌ನ ಮಹಿಳಾ ಸಹಸ್ ಕೇರಳ ಯಾತ್ರೆಗೆ ಚಾಲನೆ
ಚೆರ್ಕಳ: ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುವ ಮಹಿಳಾ ಸಾಹಸ್ ಕೇರಳ ಯಾತ್ರೆಯನ್ನು ಚೆರ್ಕಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದ ಕೆ.ಸಿ. ವೇಣುಗೋಪಾಲ್ ಅವರು ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಜೆಬಿ ಮೆತ್ತರ್ ಅವರಿಗೆ ಧ್ವಜ ಹಸ್ತಾಂತರಿಸಿ ಉದ್ಘಾಟಿಸಿದರು. ಕೇರಳದ ಹೊಣೆಗಾರಿಕೆಯುಳ್ಳ ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪಾ ದಾಸ್ ಮುನ್ಶಿ, ಶಾಸಕರಾದ ಪಿ.ಸಿ. ವಿಷ್ಣುನಾಥ್, ಅನ್ವರ್ ಸಾದತ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾನಿ ಮೋಳ್ ಉಸ್ಮಾನ್, ಮನ್ಸೂರ್, ವಿ.ಪಿ. ಸಜೀಂದ್ರನ್, ಸೋನಿ ಸೆಬಾಸ್ಟಿಯನ್, ಪಿ.ಕೆ. ಫೈಸಲ್, ಹಕೀಂ ಕುನ್ನಿಲ್, ಮಿನಿ ಚಂದ್ರನ್ ಮೊದಲಾದವರು ಮಾತನಾಡಿದರು. ಯಾತ್ರೆ ಸೆ. ೩೦ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಳ್ಳಲಿದೆ.