ಮಹಿಳಾ ದಿನಾಚರಣೆ: ಮಹಿಳಾ ಯೂತ್‌ವಿಂಗ್‌ನಿಂದ  ಜನರಲ್ ಆಸ್ಪತ್ರೆಗೆ ಫ್ಯೂರಿಫಯರ್ ಕೊಡುಗೆ

ಕಾಸರಗೋಡು: ಜನರಲ್ ಆಸ್ಪತ್ರೆಗೆ ಕಾಸರಗೋಡು ಮರ್ಚೆಂಟ್ಸ್ ಯೂತ್ ಮಹಿಳಾ ವಿಂಗ್‌ನ ಘಟಕ ಸ್ನೇಹ ಉಡುಗೊರೆ ನೀಡಿದೆ. ಮಹಿಳಾ ದಿನಾಚರಣೆಯಂಗವಾಗಿ ಜನರಲ್ ಆಸ್ಪತ್ರೆಯ ಕ್ಯಾಶ್ವಾಲಿಟಿಗೆ ವಾಟರ್ ಫ್ಯೂರಿಫಯರ್ ಕೊಡುಗೆಯಾಗಿ ನೀಡಲಾಯಿತು. ಘಟಕ ಅಧ್ಯಕ್ಷೆ ಉಮಾ ಸುಮಿತ್ರನ್ ಕೊಡುಗೆಯನ್ನು ಸಾಹಿರ ಅಹಮ್ಮದ್‌ರಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಬೀನಾ ಶೆಟ್ಟಿ, ಕೋಶಾಧಿಕಾರಿ ಸುಚಿತ್ರಾ ಪಿಳ್ಳೆ, ಜಿಲ್ಲಾ ಉಪಾಧ್ಯಕ್ಷೆ ಆಶಾ ರಾಧಾಕೃಷ್ಣನ್, ಜೊತೆ ಕಾರ್ಯದರ್ಶಿಗಳಾದ ಖೈರುನ್ನೀಸ, ಪೂರ್ಣಿಮಾ ಭಾಗವಹಿಸಿದರು. ಬಳಿಕ ಕೂಡ್ಲು ಗಂಗೆ ರಸ್ತೆಯ ಐ.ಕೆ. ನೆಲ್ಯಾಟ್ ಟೀಚರ್, ವಿದ್ಯಾನಗರ ಕೃಷ್ಣ ಆಸ್ಪತ್ರೆಯ ಡಾ| ಯಶೋಧ, ಅಣಂಗೂರಿನ ಶೋಭಾ ಚಂದ್ರಶೇಖರ್ ಎಂಬಿವರನ್ನು ಅವರ ಮನೆಗೆ ತಲುಪಿ ಮರ್ಚೆಂಟ್ಸ್ ಮಹಿಳಾ ಘಟಕ ಕಾರ್ಯಕರ್ತರು ಗೌರವಿಸಿದರು.

RELATED NEWS

You cannot copy contents of this page