ಮಹಿಳೆಯರ ಪರವಾಗಿ ಮಾತನಾಡುತ್ತಿರುವ ಸರಕಾರ ಜತೆಗೆ ಬೆಟೆಗಾರರನ್ನು ಸಂರಕ್ಷಿಸುತ್ತಿದೆ- ಕೆ. ಸುರೇಂದ್ರನ್
ಕಾಸರಗೋಡು: ಮಹಿಳೆಯರ ಪರವಾಗಿ ಮಾತನಾಡುತ್ತಿರುವ ರಾಜ್ಯ ಸರಕಾರ ಅದರ ಜೊತೆಗೆ ಮಹಿಳೆಯರನ್ನು ಬೇಟೆಯಾಡುವವರನ್ನು ಸಂರಕ್ಷಿಸುವ ವಿಚಿತ್ರ ನಿಲುವು ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ.
ಕಾಸರಗೋಡಿನಲ್ಲಿ ನಿನ್ನೆ ಸುದ್ಧಿಗಾರ ರೊಂದಿಗೆ ಅವರು ಮಾತನಾಡುತ್ತಿದ್ದರು. ಮಹಿಳೆಯರಿಗೆ ನ್ಯಾಯ ನಿಷೇಧಿಸುವ ರೀತಿಯ ಯೋಜನಾಬದ್ಧವಾದ ರೀತಿಯಲ್ಲಿ ಸರಕಾರ ಕಾರ್ಯವೆಸಗು ತ್ತಿದೆ. ಹೇಮಾ ವರದಿಯಲ್ಲಿ ಕೆಲವು ವಿಷಯಗಳನ್ನು ಸರಕಾರ ಮರೆಮಾಚ ತೊಡಗಿದೆ. ಆ ಮೂಲಕ ಕೆಲವರನ್ನು ಸಂರಕ್ಷಿಸುವ ಯತ್ನವನ್ನೂ ಸರಕಾರ ನಡೆಸುತ್ತಿದೆ. ಆದ್ದರಿಂದ ಹೇಮಾ ವರದಿ ಕೇವಲ ಒಂದು ಜಲರೇಖೆಯಾಗಿ ಮಾರ್ಪಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.
ಸಿಪಿಎಂ, ಎಡರಂಗ ಹಾಗೂ ಮಹಿಳಾ ಸಂಘಟನೆಗಳೆಲ್ಲಾ ಇಂತಹ ಸಂದರ್ಭದಲ್ಲಿ ಕಾಶಿಗೆ ಹೋಗಿದ್ದರೇ ಎಂದು ಅವರು ಪ್ರಶ್ನಿಸಿದ್ದಾರೆ.