ಮಹಿಳೆ ಮನೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಮಹಿಳೆಯೋರ್ವೆ ಮನೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪೆರ್ಲ ಬಜಕೂಡ್ಲು ನಿವಾಸಿ ಕೃಷ್ಣ ನಾಯ್ಕ ಎಂಬವರ ಪತ್ನಿ ವಸಂತಿ (57) ಸಾವನ್ನಪ್ಪಿದ ಮಹಿಳೆ. ಇವರು ನಿನ್ನೆ ಸಂಜೆ ಮನೆಯಲ್ಲಿ ಪ್ರಜ್ಞಾಹೀನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದನ್ನು ಕಂಡ ಮನೆಯವರು ತಕ್ಷಣ ಕಾಸರ ಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ದ್ದಾರೆ. ಬಳಿಕ ವೈದ್ಯ ತಪಾಸಣೆಯಲ್ಲಿ ಸಾವನ್ನಪ್ಪಿರುವುದನ್ನು ಖಚಿತಪಡಿ ಸಲಾಗಿದೆ. ಈ ಬಗ್ಗೆ ಪುತ್ರ ಗೋಪಾಲ ಕೃಷ್ಣ ನೀಡಿದ ದೂರಿನಂತೆ ಬದಿ ಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತರು ಮಕ್ಕಳಾದ ಅನುರಾಧಾ, ಗೀತಾಕುಮಾರಿ, ಗೋಪಾಲಕೃಷ್ಣ, ಅಳಿಯಂದಿರಾದ ನಾರಾಯಣ, ರಮೇಶ, ಸಹೋದರರಾದ ನಾರಾಯಣ, ಈಶ್ವರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.