ಮಹಿಳೆ ಮನೆಯಲ್ಲಿ ಸುಟ್ಟು ಗಾಯಗೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಮಹಿಳೆ ಮನೆಯೊಳಗೆ ಸುಟ್ಟು ಗಾಯಗೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.   ಅಣಂಗೂರು ಎಂ.ಜಿ. ಕಾಲನಿ ಸಮೀಪದ ನಿವಾಸಿ ಅಪ್ಪು ಎಂಬವರ ಪತ್ನಿ ಲಕ್ಷ್ಮಿ (85) ಎಂಬವರು ಸಾವನ್ನಪ್ಪಿದ ಮಹಿಳೆ. ಇಂದು ಮುಂಜಾನೆ ಇವರ ಪುತ್ರ ಹಾಗೂ ಸೊಸೆ  ಪಿಲಿಕುಂಜೆ ದೈವಸ್ಥಾನಕ್ಕೆ ತೆರಳಿದ್ದರೆನ್ನಲಾಗಿದೆ. ಬೆಳಿಗ್ಗೆ 7 ಗಂಟೆ ವೇಳೆ ಮನೆಯೊಳಗಿಂದ ಹೊಗೆ ಏಳುತ್ತಿರುವುದನ್ನು ಕಂಡ ನೆರೆಮನೆ ನಿವಾಸಿಗಳು ಸ್ಥಳಕ್ಕೆ ತಲುಪಿ ನೋಡಿದಾಗ ಕೊಠಡಿಯಿಂದ ಬೆಂಕಿ ಕಾಣಿಸಿದೆ. ಅವರು ನೀಡಿದ ಮಾಹಿತಿಯಂತೆ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದ್ದು, ಆದರೆ ಅಷ್ಟರೊಳಗೆ ಲಕ್ಷ್ಮಿ ಮೃತಪಟ್ಟಿದ್ದರೆಂದು ಹೇಳಲಾಗುತ್ತಿದೆ. ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾಸರಗೋಡು ಪೊಲೀಸರು  ಘಟನಾ ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.

ಮೃತರು ಮಕ್ಕಳಾದ ಪ್ರಭಾಕರ,ಕುಸುಮ, ಸುಮತಿ, ಸೊಸೆ ಚಂದ್ರಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page