ಮಹೋತ್ಸವ ಪ್ರತೀತಿ ಬೀರಿದ ನಗರಸಭಾ ಕ್ರೀಡಾಂಗಣ ರಸ್ತೆ ನಾಮಕರಣ ಕಾರ್ಯಕ್ರಮ: ಕಾಸರಗೋಡಿನ ಪ್ರತಿಭೆಗಳೂ ಸೇರಿದಂತೆ ಕೇರಳದವರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಬೇಕು-ಸುನಿಲ್ ಗವಾಸ್ಕರ್
ಕಾಸರಗೋಡು: ಕಾಸರಗೋಡಿನ ಪ್ರತಿಭೆಗಳೂ ಸೇರಿದಂತೆ ಕೇರಳದವರೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಬೇಕು. ರಣಜಿ ಟ್ರೋಫಿಯಲ್ಲ್ಲಿ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶಿಸಿದ ಕೇರಳತಂಡ ಹಾಗೂ ಕೇರಳದ ಗೆಲುವಿನ ಪ್ರಧಾನ ರೂವಾರಿ ಕಾಸರಗೋಡು ತಳಂಗರೆಯ ಪ್ರತಿಭೆ ಮಹಮ್ಮದ್ ಅಸರುದ್ದೀನ್ ಬಾರಿಸಿದ ಭರ್ಜರಿ ಶತಕವನ್ನು ನೋಡಿದರೆ ಕ್ರಿಕೆಟ್‌ನಲ್ಲಿ ಕೇರಳ ಮಿಂಚತೊಡಗಿದೆ ಎಂಬುವುದಕ್ಕಿರುವ ಸ್ಪಷ್ಟ ನಿದರ್ಶನವಾಗಿದೆ. ಇದು ದೊಡ್ಡ ಹೆಮ್ಮೆಯ ವಿಷಯವಾಗಿದೆಯೆಂದು ಭಾರತೀಯ ಕ್ರಿಕೆಟ್ ಜಗತ್ತಿನ ಇತಿಹಾಸ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕಾಸರಗೋಡು ವಿದ್ಯಾನಗರದಲ್ಲಿರುವ ಕಾಸರಗೋಡು ನಗರಸಭೆಯ ಸುನಿಲ್ ಗವಾಸ್ಕರ್ ನಾಮಕರಣಗೊಳಿಸಿದ ರಸ್ತೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಗೂ ನಂತರ ಚೆಟ್ಟುಂಗುಳಿ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಅದ್ದೂರಿಯ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗವಾಸ್ಕರ್ ಮಾತನಾಡುತ್ತಿದ್ದರು.
ನಾನು ಮುಂಬೈ ನಿವಾಸಿಯಾ ಗಿದ್ದೇನೆ. ಅಲ್ಲಿ ಅದೆಷ್ಟೋ ರಸ್ತೆಗಳಿವೆ. ಆದರೆ ಆ ರಸ್ತೆಗಾದರೂ ಈತನಕ ನನ್ನ ಹೆಸರಿಡಲಿಲ್ಲ. ಆದರೆ ಕೇರಳದ ಕಾಸರಗೋಡಿನಲ್ಲಿ ನನ್ನ ಹೆಸರಲ್ಲಿ ರಸ್ತೆಯೊಂದು ಹುಟ್ಟಿಕೊಂಡಿದೆ. ಅದಕ್ಕೆ ನಾನು ಇಡೀ ಕಾಸರಗೋಡು ಜನತೆಗೆ ಚಿರಋಣಿಯಾಗಿದ್ದೇನೆ. ಇದು ಕೇರಳದ ಪ್ರತಿ ಕ್ರಿಕೆಟ್ ಅಭಿಮಾನಿಗಳ ನೆನಪಿನಾ ಳದಲ್ಲಿ ಸದಾ ಉಳಿದುಕೊಳ್ಳುವ ವಿಷಯವಾಗಿದೆ ಎಂದು ಹೇಳಿದ್ದಾರೆ.
ರಸ್ತೆ ನಾಮಕರಣ ಹಾಗೂ ಸನ್ಮಾನ ಕಾರ್ಯಕ್ರಮ ಕಾಸರಗೋಡಿನಲ್ಲಿ ಭಾರೀ ಉತ್ಸವದ ಪ್ರತೀತಿ ಬೀರಿತು. ಅಭಿಮಾನಿಗಳ ಆವೇಶ ಈ ವೇಳೆ ಮುಗಿಲು ಮುಟ್ಟಿತ್ತು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಗವಾಸ್ಕರ್‌ರಿಗೆ ಸ್ಮರಣಿಕೆ ಫಲಕ ನೀಡಿ ಸನ್ಮಾನಿಸಿ ಗೌರವಿಸಿದರು. ಪೊಲೀಸರ ವತಿಯಿಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಗವಾಸ್ಕರ್‌ರಿಗೆ ಸ್ಮರಣಿಕೆ ನೀಡಿದರು. ಮಾತ್ರವಲ್ಲ ವಿವಿಧ ಸಂಘಟನೆಗಳ ವತಿಯಿಂ ದಲೂ ಸ್ಮರಣಿಕೆಗಳನ್ನು ನೀಡಲಾ ಯಿತು. ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಖಾದರ್ ತೆರುವತ್ತ್, ಸಹೀರ್, ಆಸಿಫ್, ನಿಜಾರ್ ತಳಂಗರೆ, ಶಂಶೀದಾ ಫಿರೋಸ್, ಯಾಹ್ಯಾ ತಳಂಗರೆ, ಟಿ.ಎ. ಶಾಫಿ ಮಾತನಾಡಿದರು.