ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂರವರ 60ನೇ ವಾರ್ಷಿಕ ಸಂಸ್ಮರಣೆ

ಕಾಸರಗೋಡು: ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂರ ವರ 60ನೇ ವಾರ್ಷಿಕ ಸಂಸ್ಮರಣೆ ದಿನದಂದು ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ಪುಷ್ಪಾರ್ಚನೆ, ಸಂಸ್ಮರಣೆ ಸಭೆ ಜರಗಿತು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿ ಮಾತನಾಡಿದರು. ದೇಶದ ಸಮಗ್ರ ಪ್ರಗತಿಗೆ ಮೂಲ ಶಿಲೆ ಹಾಕಿರುವುದು ಭಾರತದ ಪ್ರಥಮ ಪ್ರಧಾನಮಂತ್ರಿಯಾದ ಜವಾಹg ಲಾಲ್ ನೆಹರೂ ಆಗಿದ್ದಾರೆಂದು ಅವರು ನುಡಿದರು.

ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಮಾಜಿ ಡಿಸಿಸಿ ಅಧ್ಯಕ್ಷ ಹಕ್ಕೀಂ ಕುನ್ನಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ.ಸಿ. ಪ್ರಭಾಕರನ್, ಕರುಣಾ ತಾಪ, ಸಿ.ವಿ. ಜೇಮ್ಸ್, ವಿ.ಆರ್. ವಿದ್ಯಾಸಾಗರ್, ಧನ್ಯಾ ಸುರೇಶ್ ಹಾಗೂ ಹಲವು ಮಂದಿ ಮುಖಂಡರು ಭಾಗವಹಿಸಿದರು.

RELATED NEWS

You cannot copy contents of this page