ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವ ಕ್ಷೇತ್ರದ ನೂತನ ಮಹಾದ್ವಾರ ನಿರ್ಮಾಣಕ್ಕೆ ಭೂಮಿಪೂಜೆ
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಕ್ಷೇತ್ರದ ನೂತನ ಮಹಾದ್ವಾರದ ನಿರ್ಮಾಣದಂಗವಾಗಿ ಭೂಮಿ ಪೂಜೆ ನಿನ್ನೆ ಜರಗಿತು. ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆ ವೈದಿಕ ಕಾರ್ಯ ನೆರವೇರಿಸಿದರು. ಕೃಷ್ಣ ಭಟ್ ಕಣ್ವತೀರ್ಥ ಉಪಸ್ಥಿತರಿದ್ದರು. ಮಹಾದ್ವಾರ ಕೊಡುಗೆಯಾಗಿ ನೀಡಿದ ಕೊಳಕೆಗುತ್ತು ಕೇಶವ ಶಂಕರ ಆಳ್ವ ಮತ್ತು ಮನೆಯವರು ಹಾಲೆರೆದು ಭೂಮಿಪೂಜೆ ನೆರವೇರಿಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಕಿರಣ್ ಶೆಟ್ಟಿ ಮಾಡ, ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ, ದಯಾಕರ ಮಾಡ, ಯೋಗೀಶ್ ಪಳ್ಳ, ಪಿ. ಸುನಿಲ್ ಕುಮಾರ್, ತಿಮ್ಮ ಭಂಡಾರಿ, ಮಂಜ ರೈ, ಕುಂಞಂಣ್ಣ ಚೌಟ, ಮುಂಡ ಶೆಟ್ಟಿ, ಬೀರು ಚೌಟ, ರಾಜ ಬೆಳ್ಚಪ್ಪಾಡ, ತಿಮಿರಿ ಬೆಳ್ಚಪ್ಪಾಡ, ಮಂಜು ಬೆಳ್ಚಪ್ಪಾಡ, ವಿಠಲ ಆಳ್ವ, ಡಾ. ಜಯಪಾಲ್ ಶೆಟ್ಟಿ, ರಘು ಶೆಟ್ಟಿ ಕುಂಜತ್ತೂರು, ಉಮೇಶ್ ಶೆಟ್ಟಿ ಹೊಸಬೆಟ್ಟು ಸಹಿತ ಹಲವು ಗಣ್ಯರು, ಸ್ಥಳೀಯರು, ಮಹಿಳೆಯರು ಉಪಸ್ಥಿತರಿದ್ದರು.