ಮಾದಕದ್ರವ್ಯ ವಶ: ಕಾರು ಸಹಿತ ಮೂವರು ಕಸ್ಟಡಿಗೆ

ಬದಿಯಡ್ಕ: ಬದಿಯಡ್ಕ ಎಕ್ಸೈಸ್ ರೇಂಜ್  ಕಚೇರಿಯ ಇನ್‌ಸ್ಪೆಕ್ಟರ್ ಸುಬಿನ್‌ರಾಜ್ ನೇತೃತ್ವದ ಅಬಕಾರಿ ತಂಡ ಕನ್ಯಪ್ಪಾಡಿ ಬಳಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ 1.95 ಗ್ರಾಂ ಮೆಥಿಫಿಟಾಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಬೇಳದ ಇಬ್ರಾಹಿಂ ಇಷ್‌ಫಾಕ್, ಬಾಡೂರಿನ ಮುಹಮ್ಮದ್ ಮಶೂಕ್ ಮತ್ತು ನೀರ್ಚಾಲಿನ ಮೊಹಮ್ಮದ್ ಫಾಯಿಸ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಎನ್‌ಡಿಪಿಎಸ್ ಕಾನೂನುಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಇವರು ಪ್ರಯಾಣಿಸುತ್ತಿದ್ದ ಕಾರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಡಬ್ಲ್ಯುಸಿಇಒ ಶಾಲಿನಿ, ಸಿಇಒಗಳಾದ ಮೋಹನ್ ಕುಮಾರ್, ಜನಾರ್ದನ, ಜೋಬಿ ಮತ್ತು ಸದಾನಂದನ್ ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page