ಮಾದಕದ್ರವ್ಯ ಸಾಗಾಟ: ಜಿಲ್ಲೆಯ 10 ಮಂದಿ ಸೇರಿ 997 ಮಂದಿಯ ಯಾದಿ ವಿಧಾನಸಭೆಯಲ್ಲಿ ಮಂಡನೆ
ಕಾಸರಗೋಡು: ಅಬಕಾರಿ ಇಲಾಖೆಯ ತೀವ್ರ ನಿಗಾದಲ್ಲಿರುವ ಮಾದಕವಸ್ತು ಸಾಗಾಟ ದಂಧೆಗೆ ಸೇರಿದ 997 ಮಂದಿಯ ಯಾದಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದರಲ್ಲಿ ಕಾಸರಗೋಡು ಜಿಲ್ಲೆಯ 10 ಮಂದಿಯ ಹೆಸರು ಕೂಡಾ ಒಳ ಗೊಂಡಿದೆ. ಈ ಪಟ್ಟಿಯಲ್ಲಿ ಒಳಗೊಂಡಿ ರುವವರಲ್ಲಿ 497 ಮಂದಿ ಖಾಯಂ ಮಾದಕ ವ್ಯವಹಾರ ದಂಧೆಯಲ್ಲಿ ನಿರತ ರಾದವರಾಗಿದ್ದಾರೆ. ಈ ಯಾದಿಯಲ್ಲಿ ಅತೀ ಹೆಚ್ಚು ಎಂಬAತೆ ಕೊಲ್ಲಂ ಜಿಲ್ಲೆಯ 74 ಮಂದಿ ಒಳಗೊಂಡಿದ್ದು 100ಕ್ಕೂ ಹೆಚ್ಚು ಮಾದಕವಸ್ತು ಸಾಗಾಟ ಪ್ರಕರಣದ 108 ಆರೋಪಿಗಳು ಇದರಲ್ಲಿದ್ದಾರೆ. ಈ ಪೈಕಿ ಕಣ್ಣೂರಿನ ಮುಹಮ್ಮದ್ ಅಸ್ಲಾಂ ಎಂಬಾತನ ವಿರುದ್ಧ ಇಂತಹ 23 ಕೇಸುಗಳಿವೆ ಎಂದು ಮುಖ್ಯಮಂತ್ರಿ ಮಂಡಿಸಿದ ವರದಿಯಲ್ಲಿ ತಿಳಿಸಲಾಗಿದೆ.
ಮಾದಕದ್ರವ್ಯ ಬೆದರಿಕೆಯನ್ನು ತಡೆಗಟ್ಟಲು ವಿದ್ಯಾರ್ಥಿ, ಯುವಜನ ಸಂಘಟನೆಗಳು, ಅಧ್ಯಾಪಕ-ರಕ್ಷಕ ಸಂಘ ಟನೆಗಳ ಸಭೆ ಕರೆದು ಸಮಗ್ರ ಕಾರ್ಯ ಯೋಜನೆಗೆ ರೂಪುನೀಡಲಾಗುವು ದೆಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ.