ಮಾದಕ ಪದಾರ್ಥ ವಿರುದ್ಧ ಆಪರೇಷನ್ ಡಿ ಹಂಟ್: 10 ದಿನದೊಳಗೆ 135 ಮಂದಿ ಸೆರೆ

ಕಾಸರಗೋಡು: ರಾಜ್ಯವ್ಯಾಪಕವಾಗಿ ನಿಷೇಧಿತ ಮಾದಕ ಪದಾರ್ಥಗಳ ಉಪಯೋಗ ಹಾಗೂ ಮಾರಾಟದ ವಿರುದ್ಧ ತಪಾಸಣೆ ತೀವ್ರಗೊಳಿಸಲಾಗಿದೆ. ರಾಜ್ಯದಲ್ಲಿ ಮಾದಕಪದಾರ್ಥಗಳ ಉಪಯೋಗದಿಂದಾಗಿ ಹೆಚ್ಚುತ್ತಿರುವ ಅಕ್ರಮ ಕಾನೂನು ವಿರುದ್ಧ ಚಟುವಟಿಕೆಗಳನ್ನು ತಡೆಹಿಡಿಯುವುದರಂಗವಾಗಿ ರಾಜ್ಯ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಪ್ರಕಾರ ತಪಾಸಣೆ ವ್ಯಾಪಕಗೊಳಿಸಿರುವುದು. ಜಿಲ್ಲೆಯಲ್ಲಿ  ಕಳೆದ 10 ದಿನಗಳ ಮಧ್ಯೆ ಒಟ್ಟು 1807 ತಪಾಸಣೆ ನಡೆಸಲಾಗಿದ್ದು, 132 ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದರಲ್ಲಿ 135 ಆರೋಪಿಗಳಿದ್ದು, 134 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 85.590 ಗ್ರಾಂ ಎಂಡಿಎಂಎ, 66.860 ಗ್ರಾಂ ಗಾಂಜಾ ವಶಪಡಿಸಲಾಗಿದೆ. ಇದರ ಹೊರತಾಗಿ 11.470 ಗ್ರಾಂ ಗಾಂಜಾ ಕಾಸರಗೋಡು ಪೊಲೀಸ್ ಠಾಣೆಯ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಂದ ವಶಪಡಿಸಿರು ವುದು ಆತಂಕಕಾರಿ ವಿಷಯವಾಗಿದೆ. ಇವರ ವಿರುದ್ಧ ಪೊಲೀಸ್ ಸೋಷ್ಯಲ್ ಬ್ಯಾಕ್‌ಗ್ರೌಂಡ್ ರಿಪೋರ್ಟ್ ಸಿದ್ಧಪಡಿಸುತ್ತಿದೆ. ಫೆಬ್ರವರಿ 22ರಂದು ಆರಂಭಗೊಂಡ ಸ್ಪೆಷಲ್ ಡ್ರೈವ್‌ನ ಮಾರ್ಚ್ ೩ವರೆಗಿರುವ ಲೆಕ್ಕಗಳಾಗಿವೆ ಇಲ್ಲಿ ವಿವರಿಸಿರುವುದು.

Leave a Reply

Your email address will not be published. Required fields are marked *

You cannot copy content of this page