ಮಾಧ್ಯಮ ಕಾರ್ಯಕರ್ತರನ್ನು ಸಾಂಸ್ಕೃತಿಕ ಕ್ಷೇಮ ನಿಧಿಯಲ್ಲಿ ಸೇರಿಸಲು ಕೆಜೆಯು ಆಗ್ರಹ
ಕುಂಬಳೆ: ಮಾಧ್ಯಮ ಕಾರ್ಯ ಕರ್ತರನ್ನು ಸಾಂಸ್ಕೃತಿಕ ಕ್ಷೇಮನಿಧಿ ಯಲ್ಲಿ ಸೇರಿಸಬೇಕೆಂದು ಕುಂಬಳೆಯಲ್ಲಿ ನಡೆದ ಕೇರಳ ಜರ್ನಲಿಸ್ಟ್‌ಸ್ ಯೂನಿಯನ್ (ಕೆಜೆಯು) ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಸುರೇಂದ್ರನ್ ಚಿಮೇನಿ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಸುಜಿತ್ ರೈ, ಮಂಜೇಶ್ವರ ತಾಲೂಕು ಆಡಳಿತ ಭಾಷಾ ಯೂನಿಯನ್ ಕೋಶಾಧಿಕಾರಿ ಕೆ.ಎಂ. ಅಬ್ಬಾಸ್ ಓನಂದ, ಲೇಖಕ ಅಬ್ದುಲ್ ಖಾದರ್ ಮಾತನಾಡಿದರು. ಅಬ್ದುಲ್ ಲತೀಫ್ ಕುಂಬಳೆ ಸ್ವಾಗತಿಸಿ, ಐ. ಮುಹಮ್ಮದ್ ರಫೀಕ್ ವಂದಿಸಿದರು. ಬಳಿಕ ಪ್ರತಿನಿಧಿ ಸಮ್ಮೇಳನ ಜರಗಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಸ್ಮಿಜನ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ರವೀಂದ್ರನ್ ಕೊಟ್ಟೋಡಿ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು. ಈ ವೇಳೆ ಹಿರಿಯ ಪತ್ರಕರ್ತರಾದ ಟಿ.ವಿ. ಚಂದ್ರಹಾಸ್, ರಾಘವನ್ ಮಣಿಯಾಟ್, ಅಶೋಕನ್ ನೀರ್ಚಾಲು, ಹಸನ್ ಬದಿಯಡ್ಕ, ಸಮಾಜ ಸೇವಕ ಕೆ.ಎಂ. ಅಬ್ಬಾಸ್, ಅಬ್ದುಲ್ ಖಾದರ್ ಎಂಬಿವರನ್ನು ಗೌರವಿಸಲಾಯಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುರೇಶ್ ಕೂಕಲ್ (ಅಧ್ಯಕ್ಷ), ಚಂದ್ರಹಾಸ ತೃಕ್ಕರಿಪುರ, ರವೀಂದ್ರನ್ ಕೊಟ್ಟೋಡಿ (ಉಪಾಧ್ಯಕ್ಷರು), ಸುರೇಂದ್ರನ್ ಚೀಮೇನಿ (ಕಾರ್ಯದರ್ಶಿ), ಪುರುಷೋತ್ತಮ ಭಟ್, ಧನ್‌ರಾಜ್ (ಜೊತೆ ಕಾರ್ಯದರ್ಶಿಗಳು), ಐ. ಮುಹಮ್ಮದ್ ರಫೀಖ್ (ಕೋಶಾ ಧಿಕಾರಿ), ರವೀಂದ್ರನ್ ಮಂಜೇಶ್ವರ, ಸುಬೈರ್ ಬದಿಯಡ್ಕ, ಅಬ್ದುಲ್ ಲತೀಫ್, ಅಬ್ದುಲ್ ಲತೀಫ್ ಉಳು ವಾರು (ಸದಸ್ಯರು) ಆಯ್ಕೆಯಾದರು.