ಮಾನವ ಅಸ್ಥಿಪಂಜರ ಪತ್ತೆ ತನಿಖೆ ಮುಂದುವರಿಕೆ
ಕುಂಬಳೆ: ಶಿರಿಯದಲ್ಲಿ ರೈಲು ಹಳಿ ಸಮೀಪ ಪೊದೆಗಳೆಡೆ ಇತ್ತೀಚೆಗೆ ಮಾನವ ತಲೆಬುರುಡೆ ಸಹಿತ ಅಸ್ತಿಪಂಜರ ಪತ್ತೆಯಾದ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಮಂಜೇಶ್ವರ ಜುಮಾ ಮಸೀದಿ ಬಳಿಯ ನಿವಾಸಿಯಾದ ರೋಶನ್ ಮೊಂತೇರೋ (45) ಎಂಬವರು 2023 ನವಂಬನಿAðದ ನಾಪತ್ತೆ ಯಾಗಿದ್ದಾರೆಂದು ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ತಲೆಬುರುಡೆ ಪತ್ತೆಯಾದ ಸ್ಥಳದಲ್ಲಿ ಕಂಡುಬAದ ಬಟ್ಟೆಬರೆಗಳನ್ನು ರೋಶನ್ ಮೊಂತೇರೋರ ಸಂಬAಧಿಕರು ಪರಿಶೀಲಿಸಿದ್ದಾರೆ. ಆದರೆ ಅದು ರೋಶನ್ ಮೊಂತೇರೋರದ್ದೆAದು ಖಚಿತಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.