ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಕಳವು ನಡೆಸಿದ ಪ್ರಧಾನ ಆರೋಪಿ ಸೆರೆ

ಬದಿಯಡ್ಕ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದಿAದ ಐದೂವರೆ ಲಕ್ಷ ರೂ.ನಷ್ಟು ಬೆಲೆಬಾಳುವ ಬೆಳ್ಳಿಯ ಛಾಯಾಚಿತ್ರ ಸೇರಿದಂತೆ ಹಲವು ಆರಾಧನಾಲಯಗಳಲ್ಲಿ ನಡೆದ ಕಳವುಗೈದ ಪ್ರಕರಣದ ಮುಖ್ಯ ಆರೋಪಿಯನ್ನು ಬದಿಯಡ್ಕ ಠಾಣೆಯ ಇನ್ಸ್ಪೆಕ್ಟರ್ ಕೆ. ಸುಧೀರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.
ಮAಗಳೂರು ಗೂಡಿನಬಳಿ ನಿವಾಸಿ ರಫೀಕ್ (ಮಹಮ್ಮದ್ ರಫೀಕ್ 36) ಬಂಧಿತ ಆರೋಪಿ ಯಾಗಿದ್ದಾನೆ. ಬೆಂಗಳೂರಿನಿAದ ಈತನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಈತ ಮಾನ್ಯದ ಭಜನಾ ಮಂದಿರ ಮಾತ್ರವಲ್ಲದೆ ಜಿಲ್ಲೆಯಲ್ಲಿ ನಡೆದ ಇತರ ಹಲವು ಕಳವು ಪ್ರಕgಣಗಳ ತಂಡದ ಮುಖ್ಯ ಸೂತ್ರಧಾರನೂ ಆಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯದ ನಿರ್ದೇಶ ಪ್ರಕಾರ ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಅಡ್ಯನಡ್ಕ ಬ್ಯಾಂಕ್ನಿAದ ಚಿನ್ನ, ನಗದು ಕಳವುಗೈದ ಪ್ರಕರಣ ಸೇರಿದಂತೆ ಕರ್ನಾಟಕದ ವಿವಿಧೆಡೆಗಳಲ್ಲಿ ನಡೆದ 60ರಷ್ಟು ಕಳವು ಪ್ರಕರಣಗಳಲ್ಲ್ಲೂ ರಫೀಕ್ ಆರೋಪಿ ಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ನವಂಬರ್ 3ರಂದು ರಾತ್ರಿ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಕಬ್ಬಿಣದ ಗೇಟ್ ಮುರಿದು ಒಳನುಗ್ಗಿ ಗರ್ಭಗುಡಿಯ ಬಾಗಿಲನ್ನು ಒಡೆದು ಅದರೊಳಗೆ ಪ್ರತಿಷ್ಠಾಪಿಸ ಲಾಗಿದ್ದ ಶ್ರೀ ಅಯ್ಯಪ್ಪ ದೇವರ ಬೆಳ್ಳಿ ಛಾಯಾಚಿತ್ರ ಫಲಕ, ಅದಕ್ಕೆ ಅಲಂಕರಿಸಲಾಗಿದ್ದ ಆರು ಕಿಲೋ ಗ್ರಾಂ ಬೆಳ್ಳಿ ಆಭರಣ, ರುದ್ರಾಕ್ಷಿಮಾಲೆ, 2 ಗ್ರಾಂ ಚಿನ್ನದ ಲಾಕೆಟ್ಗಳನ್ನು ಕಳವುಗೈಯ್ಯಲಾಗಿತ್ತು.
ಅದೇ ದಿನದಂದು ಪೊಯಿನಾಚಿ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಗರ್ಭಗುಡಿಯ ಬಾಗಿಲು, ಸೇವಾ ಕೌಂಟರ್ ಮತ್ತು ದೇವಸ್ಥಾನದ ಕಚೇರಿಯ ಬಾಗಿಲುಗಳನ್ನು ಒಡೆದು 55,000 ರೂ. ಮೌಲ್ಯದ ಎಂಟು ಗ್ರಾಂ ಚಿನ್ನ, 10,000 ರೂ. ಬೆಲೆಯ ಡಿವಿಆರ್, ಕಾಣಿಕೆಡಬ್ಬಿ ಒಡೆದು ಅದರೊಳಗಿದ್ದ 5000ರೂ. ನಗದನ್ನು ಕಳವುಗೈಯ್ಯಲಾಗಿತ್ತು. ಈ ಕಳವು ನಡೆಸಿರುವುದು ಮೊಹಮ್ಮದ್ ರಫೀಕ್ನ ನೇತೃತ್ವದ ಕಳ್ಳರ ತಂಡವಾಗಿದೆಯೆAದು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಕಳವು ನಡೆದ ಮೊದಲ ದಿನ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ಕಾಣಿಕೆ ಡಬ್ಬಿ ಒಡೆದು ಅದರೊಳಗಿದ್ದ ಹಣವನ್ನು ಕಳ್ಳರು ದೋಚಿದ್ದರು. ಮಾತ್ರವಲ್ಲ ನೆಲ್ಲಿಕಟ್ಟೆ ನಾರಾಯಣ ಗುರು ಮಂದಿರದಲ್ಲ್ಲೂ ಕಳವು ನಡೆದಿತ್ತು. ಈ ಪ್ರಕರಣಗಳ ಇತರ ಆರೋಪಿಗಳಾದ ಮಂಗಳೂರು ಉಳ್ಳಾಲದ ಮೊಹಮ್ಮದ್ ಫೈಸಲ್, ಬಂಟ್ವಾಳದ ಸದಾತ್ ಅಲಿ, ಕುಂಬಳೆ ಕೊಡ್ಯಮ್ಮೆಯ ಇಬ್ರಾಹಿಂ ಕಲಂದರ್ ಎಂಬವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

ಭಜನಾ ಮಂದಿರದಿಂದ ಕದ್ದ ಬೆಳ್ಳಿ ಛಾಯಾಚಿತ್ರವನ್ನು ಮಾರಾಟ ಮಾಡಿದ್ದು ಬೆಂಗಳೂರಿನಲ್ಲಿ

ಬದಿಯಡ್ಕ: ಮಾನ್ಯ ಅಯ್ಯಪ್ಪ ಭಜನಾ ಮಂದಿರದಿಂದ ಕಳವುಗೈದ ಶ್ರೀ ಅಯ್ಯಪ್ಪ ದೇವರ ಬೆಳ್ಳಿ ಛಾಯಾಚಿತ್ರವನ್ನು ಆರೋಪಿ ಬೆಂಗಳೂರಿನ ಅಂಗಡಿಯೊಂದಕ್ಕೆ ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅದರಂತೆ ಬದಿಯಡ್ಕ ಪೊಲೀಸರು ಬೆಂಗಳೂರಿನ ಆ ಅಂಗಡಿಗೆ ಸಾಗಿ ಪರಿಶೀಲನೆ ನಡೆಸಿದಾಗ ಬೆಳ್ಳಿ ಛಾಯಾಚಿತ್ರವನ್ನು ಅಂಗಡಿ ಮಾಲಕ  ಕರಗಿಸಿ ತುಂಡುಗಳನ್ನಾಗಿಸಿದ್ದನು.  ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ಭಜನಾ ಮಂದಿರದಿಂದ ಕಳವುಗೈದ ೩೫೦ ಗ್ರಾಂ ತೂಕದ ದೇವರ ಹಸ್ತ ಮತ್ತು ಕಾಣಿಕೆ ಡಬ್ಬಿಯಿಂದ ದೋಚಿದ ಹಣವನ್ನು ಈ ಪ್ರಕರಣದ ಇನ್ನೋರ್ವ ಆರೋಪಿ ಫೈಸಲ್‌ನ ಉಳ್ಳಾಲದಲ್ಲಿರುವ ಮನೆಯಿಂದ  ಪೊಲೀಸರು ಪತ್ತೆಹಚ್ಚಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಮುಖ್ಯ ಆರೋಪಿ ಮೊಹಮ್ಮದ್ ರಫೀಕ್  ತನ್ನ ಸ್ವಂತ ಮೊಬೈಲ್ ಫೋನ್ ಬಳಸದೆ ವಲಸೆ ಕಾರ್ಮಿಕರನ್ನು ಬೆದರಿಸಿ ಅವರಿಂದ ಕದ್ದ ಮೊಬೈಲ್ ಫೋನ್‌ಗಳನ್ನು ಉಪಯೋಗಿಸಿ  ಅವುಗಳನ್ನು ಕಳವು ವ್ಯವಹಾರಕ್ಕಾಗಿ ಉಪಯೋಗಿಸು ತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಬಂಧಿಸಿದ ಆರೋಪಿಗಳನ್ನು ವಿಚಾರಣೆಗೊಳ ಪಡಿಸಿದಾಗಲೇ ಈ ಕಳವು ಪ್ರಕರಣಗಳ  ಸೂತ್ರಧಾರ ಮೊಹಮ್ಮದ್ ರಫೀಕ್‌ನ ಮಾಹಿತಿ ಲಭಿಸಿತ್ತು. ಅದರ ಜಾಡು ಹಿಡಿದು ನಡೆಸಿದ ಶೋಧ ಕಾರ್ಯಾ ಚರಣೆಯಲ್ಲಿ ಸೂತ್ರಧಾರನನ್ನು ಕೊನೆಗೂ ಸೆರೆಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪಾ ಮತ್ತು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರ ಮೇಲ್ನೋಟದ ವಿಶೇಷ ಪೊಲೀಸರ ತಂಡ ಆರೋಪಿಯನ್ನು  ಸೆರೆಹಿಡಿದಿದೆ. ಎಸ್ ಐಗಳಾದ ಕೆ.ಕೆ. ನಿಖಿಲ್, ಸಿ.ಎಂ. ಥೋಮಸ್,  ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಪಿ.ಕೆ. ಪ್ರಸಾದ್, ಸಿವಿಲ್ ಪೊಲೀಸ್ ಆಪೀಸರ್‌ಗಳಾದ ಮಹಮ್ಮದ್ ಆರಿಫ್ ಮತ್ತು ಕೆ. ಶ್ರೀಜೇಶ್ ಎಂಬವರು ಈ ತಂಡದಲ್ಲಿ ಒಳಗೊಂಡಿದ್ದರ.

Leave a Reply

Your email address will not be published. Required fields are marked *

You cannot copy content of this page