ಮಾವಿನಕಟ್ಟೆಯಲ್ಲಿ ಬಸ್-ಕಾರು ಢಿಕ್ಕಿ: ಕಾರು ಚಾಲಕನಿಗೆ ಗಂಭೀರ
ಬದಿಯಡ್ಕ: ಮಾವಿನಕಟ್ಟೆಯಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ ಹಾಗೂ ಕಾರು ಢಿಕ್ಕಿ ಹೊಡೆದು ಕಾರು ಚಾಲಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಮುಬಾಶಿರ್ (22) ಎಂಬವರು ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಇವರು ಎಲ್ಲಿ ಯವರೆಂದು ತಿಳಿದುಬಂದಿಲ್ಲ. ಅಪಘಾತದಿಂದ ಕಾರು ಪೂರ್ಣವಾಗಿ ಹಾನಿಗೀಡಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಬದಿಯಡ್ಕ ಹಾಗೂ ಚೆಂಗಳದ ಆಸ್ಪತ್ರೆಗೆ ತಲುಪಿಸಿದ್ದು ಆದರೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.