ಮೀಂಜ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಲೋಕ್  ಫಂಡ್‌ನಿಂದ ನಿರ್ಮಿಸಲಾದ ರಸ್ತೆಗಳ ಉದ್ಘಾಟನೆ

ಮಂಜೇಶ್ವರ: ಮೀಂಜ ಪಂಚಾ ಯತ್‌ನ ೬ನೇ ವಾರ್ಡ್‌ನಲ್ಲಿ ಬ್ಲೋಕ್ ಪಂಚಾಯತ್ ಫಂಡ್‌ನಿಂದ ನಿರ್ಮಿಸ ಲಾದ ಎರಡು ಡಾಮರೀಕರಣ ರಸ್ತೆಗಳ ಉದ್ಘಾಟನಾ ಸಮಾರಂಭ ಶನಿವಾರ ಕಲ್ಲುಗದ್ದೆ ಮೃತ್ಯುಂಜಯ ಯುವಕ ವೃಂದದ ಕಟ್ಟಡದಲ್ಲಿ ನಡೆಯಿತು. ತೊಟ್ಟೆತ್ತೋಡಿ-ಕಲ್ಲಗದ್ದೆ ಬುಡ್ರಿಯ ಶ್ರೀ ಮಲರಾಯ ಬಂಟ ದೈವಸ್ಥಾನ ರಸ್ತೆ ಮತ್ತು ಕೆದ್ವಾರ್ ಕಲ್ಲಗದ್ದೆ ಅಮ್ಮೆನಡ್ಕದ ನೂತನ ರಸ್ತೆ ಡಾಮರೀಕರಣಗೊಂಡಿದೆ. ಮಂಜೇಶ್ವರ ಬ್ಲೋಕ್  ಪಂಚಾಯತ್ ಅಧ್ಯಕ್ಷೆ ಶಮೀನ ಟೀಚರ್ ಉದ್ಘಾಟಿಸಿದರು.

ಬಳಿಕ ಅಭಿನಂದನಾ ಕಾರ್ಯಕ್ರಮ ನಡೆಯಿತು. ಬ್ಲೋಕ್  ಉಪಾಧ್ಯಕ್ಷ ಮೊಹಮ್ಮದ್ ಹನೀಫ್, ಬ್ಲೋಕ್ ಸದಸ್ಯ ಕೆ.ವಿ. ರಾಧಾಕೃಷ್ಣ ಭಟ್, ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಹಾಗೂ ಸ್ಥಳೀಯರು ಭಾಗವಹಿಸಿದರು. ಅಶ್ವಿನ್ ಕುಮಾರ್ ಕಲ್ಲಗದ್ದೆ ಸ್ವಾಗತಿಸಿ, ಶಿವಾನಂದ ಕಲ್ಲಗದ್ದೆ ವಂದಿಸಿದರು.

You cannot copy contents of this page