ಮೀಟರ್ ಬಾಡಿಗೆ ರೂಪದಲ್ಲಿ ವಿದ್ಯುನ್ಮಂಡಳಿ ವಸೂಲಿ ಮಾಡಿದ್ದು 1,532 ಕೋಟಿ ರೂ.
ಕಾಸರಗೋಡು: ವಿದ್ಯುತ್ ಮೀಟರ್ ಬಾಡಿಗೆ ವತಿಯಿಂದ ಗ್ರಾಹಕರಿಂದ ಕಳೆದ 14 ವರ್ಷಗಳಲ್ಲಾಗಿ ವಿದ್ಯುನ್ಮಂಡಳಿ ಒಟ್ಟಾರೆಯಾಗಿ 1532 ಕೋಟಿ ರೂ. ವಸೂಲಿ ಮಾಡಿದೆ. ಇದು 2010ನೇ ವರ್ಷದಿಂದ ಈ ತನಕ ಮಾಡಲಾದ ವಸೂಲಿಯ ಲೆಕ್ಕಾಚಾರವಾಗಿದೆ.
ವಿದ್ಯುತ್ ಮೀಟರ್ಗೆ ಬಾಡಿಗೆ ವಸೂಲಿ ಮಾಡುವ ಕ್ರಮ 2002ರಿಂದಲೇ ಜ್ಯಾರಿಗೊಳಿಸ ಲಾಗಿದೆ. ರಾಜ್ಯದ 100494592 ಮನೆ ಸಂಪರ್ಕ, ಬೃಹತ್ ಹೈ ಟೆನ್ಶನ್ ಸಂಪರ್ಕ ಹೊಂದಿರುವ 144 ಪ್ಲಾಟ್ ಸಮುಚ್ಛಯಗಳ ಮೀಟರ್ಗಳ ವತಿಯಿಂದ ಲಭಿಸಿದ ಬಾಡಿಗೆ ಮೊತ್ತವಾಗಿದೆ ಇದು. 612.42 ರೂ.ಗೆ ಖರೀದಿಸಲಾಗುವ ಸಿಂಗಲ್ ಫೇಸ್ (5000 ವ್ಯಾಟ್ಸ್ ಗಿಂತ ಕೆಳಗೆ), ಸಿಂಗಲ್ ಫೇಸ್ ಮೀಟರ್ ಹಾಗೂ 1600 ರೂ.ಗೆ ಖರೀದಿಸಲಾಗುವ ತ್ರಿಫೇಸ್ (5000 ವ್ಯಾಟ್ಸ್ಗಿಂತ ಹೆಚ್ಚು) ಮೀಟರ್ಗಳಿಗೆ ಪ್ರತೀ ತಿಂಗಳು ಬಾಡಿಗೆ ಹೊರತಾಗಿ ಶೇ. 18ರಷ್ಟು ಜಿಎಸ್ಟಿಯನ್ನೂ ವಸೂಲಿ ಮಾಡಲಾಗುತ್ತಿದೆ. ಸಿಂಗಲ್ ಫೇಸ್ ಪೋಸ್ಟ್ನಿಂದ ವಿದ್ಯುತ್ ಪಡೆಯುವ ಮನೆಗಳಿಗೆ ತಿಂಗಳಿಗೆ ತಲಾ 6 ರೂ.ನಂತೆಯೂ, ತ್ರಿ ಫೇಸ್ ಮೀಟರ್ಗಳಿಗೆ ತಿಂಗಳಿಗೆ ತಲಾ 15 ರೂ.ನಂತೆಯೂ, ಎಲ್ಟಿ ಸಿಟಿ ವಾಲ್ಟ್ ವಯರ್ ಹೊಂದಿರುವ ಸ್ಟಾಟಿಕ್ ಮೀಟರ್ಗಳಿಗೆ ತಿಂಗಳಿಗೆ ತಲಾ 30 ರೂ.ನಂತೆಯೂ ಬಾಡಿಗೆ ವಸೂಲಿ ಮಾಡಲಾಗುತ್ತಿದೆ.