ಮುಂಡೋಳು ಕ್ಷೇತ್ರದಲ್ಲಿ ಮೃತ್ಯುಂಜಯ ಹೋಮ ಫೆ.1ರಂದು
ಮುಳ್ಳೇರಿಯ: ಕಾರಡ್ಕ ಮುಂಡೋಳು ಶ್ರೀ ಮಹಾವಿಷ್ಣು, ದುರ್ಗಾಪರಮೇಶ್ವರಿ, ಶಾಸ್ತಾರ ಕ್ಷೇತ್ರದಲ್ಲಿ ಮೃತ್ಯುಂಜಯ ಹೋಮ, ಅಖಂಡ ನಾಮಜಪ ಫೆಬ್ರವರಿ 1ರಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಸಿದ ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ನಾಡಿನ ದೋಷ ಪರಿಹಾರಕ್ಕಾಗಿ, ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ಮಹಾ ಗಣಪತಿ ಹೋಮ, ಅಖಂಡ ನಾಮಜಪ, ಮೃತ್ಯುಂಜಯ ಹೋಮ, ಭಾಗ್ಯಸೂಕ್ತ, ಶ್ರೀಸೂಕ್ತ, ಐಕ್ಯಮತ್ಯಸೂಕ್ತ ಮೊದಲಾದ ಕಾರ್ಯಕ್ರಮಗಳನ್ನು ನಡೆ ಬೇಕೆಂದು ತಿಳಿದುಬಂದಿದ್ದು, ಇದ ರಂತೆ ಅಂದು ಬೆಳಿಗ್ಗೆ 6.30ರಿಂದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ಜರಗಲಿದೆ. ಜೊತೆಯಲ್ಲಿ ಅಂದು ಮಧ್ಯಾಹ್ನ ಬಲಿವಾಡು ಕೂಟ, ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಅಖಂಡ ನಾಮಜಪ ಬೆಳಿಗ್ಗೆ 6.30ರಿಂದ ಸಂಜೆ 6.30ರವರೆಗೆ ನಡೆಯಲಿದೆ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ, ಟ್ರಸ್ಟಿಗಳು, ಜೀರ್ಣೋದ್ಧಾರ ಸಮಿತಿ ಸದಸ್ಯರು ತಿಳಿಸಿದ್ದಾರೆ.