ಮುಂದಿನ ವರ್ಷದಿಂದ 5, 6,7ನೇ ತರಗತಿಗಳಲ್ಲೂ ಕನಿಷ್ಠ ಅಂಕ ಸಂಪ್ರದಾಯ
ತಿರುವನಂತಪುರ: ಈ ವರ್ಷ ಎಂಟನೇ ತರಗತಿಯಲ್ಲಿ ಜ್ಯಾರಿಗೊಳಿ ಸಿದ ಕನಿಷ್ಠ ಅಂಕ ಸಂಪ್ರದಾಯವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ 5, 6, ಹಾಗೂ 7ನೇ ತರಗತಿಗಳಲ್ಲೂ ಜ್ಯಾರಿಗೊಳಿಸಲಾಗುವುದೆಂದು ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.
ಮುಂದಿನ ವರ್ಷ ೮ನೇ ತರಗತಿಯ ಮೌಲ್ಯಮಾಪನ ಇನ್ನಷ್ಟು ಕಠಿಣಗೊಳಿಸಲಾಗುವುದು. ಕಲೆ ಹಾಗೂ ಕ್ರೀಡೆಗೆ ನೀಡಿರುವ ಪಿರಿಯಾಡ್‌ಗಳನ್ನು ಕಡ್ಡಾಯವಾಗಿ ಅವುಗಳಿಗಾಗಿಯೇ ಉಪಯೋಗಿಸಬೇಕೆಂದೂ ತಿಳಿಸಲಾಗಿದೆ. ಹೈಯರ್ ಸೆಕೆಂಡರಿ ಅಧ್ಯಾಪಕರ ಆನ್‌ಲೈನ್ ವರ್ಗಾವಣೆ ಮೇ ತಿಂಗಳಲ್ಲಿ ಪೂರ್ತಿಗೊಳ್ಳಲಿದೆ. ಇದಕ್ಕಿರುವ ಅರ್ಜಿ ಆಹ್ವಾನಿಸಿ ಎರಡು ದಿನಗಳೊಳಗೆ 2000ಕ್ಕೂ ಹೆಚ್ಚು ಅರ್ಜಿಗಳು ಲಭಿಸಿವೆ. ದೂರುಗಳನ್ನು ಪರಿಹರಿಸಲು ನೂತನವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಡಿಶನಲ್ ಸೆಕ್ರೆಟರಿ, ಹೈಯರ್ ಸೆಕೆಂಡರಿ ಸೀನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಕೈಟ್ ಸಿಇಒ ಎಂಬಿವರು ಸದಸ್ಯರಾದ ಸಮಿತಿ ರೂಪೀಕರಿಸಲಾಗುವುದು.
ನವೀಕೃತ ಪಠ್ಯಯೋಜನೆ ಪರಿಷ್ಕರಣೆಯ ಅಂಗವಾಗಿ ರಾಜ್ಯದ ಎಲ್ಲಾ ಅಧ್ಯಾಪಕರಿಗೂ ಮೇ ೧೩ರಿಂದ ೫ ದಿನಗಳ ಕಾಲ ವಿವಿಧೆಡೆಗಳಲ್ಲಿ ತರಬೇತಿ ನೀಡಲಾಗುವುದು. ಅದೇ ರೀತಿ ಮಾದಕ ವಿರುದ್ಧ ಪ್ರಚಾರ ಕಾರ್ಯಕ್ರಮದಂಗವಾಗಿ ಎಲ್ಲಾ ಅಧ್ಯಾಪಕರಿಗೂ ತರಬೇತಿ ನೀಡಲಾಗುವುದೆಂದು ಸಚಿವ ತಿಳಿಸಿದ್ದಾರೆ.