ಮುಟ್ಟಂ ಕಡಪ್ಪುರದಲ್ಲಿ ಬೋಟ್ ಬೆಂಕಿಗಾಹುತಿ: ಸಮಗ್ರ ತನಿಖೆಗೆ ಸಿಪಿಎಂ ಒತ್ತಾಯ
ಬಂದ್ಯೋಡು: ಬಂದ್ಯೋಡು ಮುಟ್ಟ್ಟಂ ಕಡಪ್ಪುರದಲ್ಲಿ ಬೋಟ್ ಬೆಂಕಿಗಾಹುತಿಯಾಗಿರುವ ಘಟನೆ ಯಲ್ಲಿ ಪೊಲೀಸ್ ಸಮಗ್ರ ತನಿಖೆ ನಡೆಸಬೇಕೆಂದು ಸ್ಥಳ ಸಂದರ್ಶಿಸಿದ ಸಿಪಿಎಂ ಏರಿಯಾ ಕಾರ್ಯದರ್ಶಿ ವಿವಿ. ರಮೇಶನ್ ಒತ್ತಾಯಿಸಿದರು. ಬೆಂಕಿ ಅವಗಡದಿಂದಾಗಿ ಸುಮಾರು 5 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಯಲ್ಲಿ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಪಕ್ಷದ ಲೋ ಕಲ್ ಕಾರ್ಯದರ್ಶಿ ಹಾರಿಸ್ ಪೈವ ಳಿಕೆ, ಏರಿಯಾ ಸಮಿತಿ ಸದಸ್ಯ ಸಾದಿಕ್ ಚೆರುಗೋಳಿ, ಕೊರಗಪ್ಪ ಬೇರಿಕೆ, ಅನಿಲ್ ಬೇರಿಕೆ ಎಂಬಿವರು ಜತೆಗಿದ್ದರು.