ಮುಳ್ಳೇರಿಯ, ಬೆಳ್ಳೂರು ಮೂಲಕ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್ ಆರಂಭಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ

ಮುಳ್ಳೇರಿಯ: ಕಾಸರಗೋಡಿನಿಂದ ಮುಳ್ಳೇರಿಯ, ಬೆಳ್ಳೂರು ಮೂಲಕ ಕರ್ನಾಟಕದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಏರ್ಪಡಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಶಶಿಧರ ಗೋಳಿಕಟ್ಟೆ ಅವರು   ಕಾಸರಗೋಡಿನಲ್ಲಿ ನಡೆದ ನವಕೇರಳ ಸಭಾದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಸ್ತುತ ಮುಳ್ಳೇರಿಯ-ಬೆಳ್ಳೂರು ರೂಟ್‌ನಲ್ಲಿ ಪುತ್ತೂರಿಗೆ ಯಾವುದೇ ಬಸ್ ಸಂಚಾರವಿಲ್ಲ. ಮುಳ್ಳೇರಿಯ ಭಾಗದಿಂದ ಪ್ರತಿದಿನ ಹಲವು ಮಂದಿ ವಿವಿಧ ಅಗತ್ಯಗಳಿಗಾಗಿ ಪುತ್ತೂರಿಗೆ ತೆರಳುವವರಿದ್ದಾರೆ. ಅವರು ಇದೀಗ ತೀವ್ರ ಸಂಚಾರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾತ್ರವಲ್ಲದೆ ಬೆಳ್ಳೂರು, ಕಾರಡ್ಕ, ಮುಳಿಯಾರು, ಕುಂಬ್ಡಾಜೆ ಪಂಚಾಯತ್‌ಗಳಲ್ಲಿ ಹಲವು ಮಂದಿ ಎಂಡೋಸಲ್ಫಾನ್ ಸಂತ್ರಸ್ತರಿದ್ದಾರೆ. ಅವರಿಗೆ ಕಾಸರ ಗೋಡು ಸಹಿತ ವಿವಿಧ ಭಾಗಗಳ ಆಸ್ಪತ್ರೆ ಸಹಿತ ಅಗತ್ಯಗಳಿಗೆ ಈಗ ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಾಗುತ್ತಿದೆ. ಇದಕ್ಕೆ ಹೆಚ್ಚಿನ ಮೊತ್ತ ಖರ್ಚು ಮಾಡ ಬೇಕಾಗುತ್ತದೆ. ಆದ್ದರಿಂದ ಪ್ರಸ್ತುತ ರೂಟ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲು ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಶಶಿಧರ ಗೋಳಿಕಟ್ಟೆ ಆಗ್ರಹಪಟ್ಟಿದ್ದಾರೆ.

RELATED NEWS

You cannot copy contents of this page