ಮುಳ್ಳೇರಿಯ ಶಾಲೆಯಲ್ಲಿ ಕುಟುಂಬಶ್ರೀಯಿಂದ ಮಾ ಕೇರ್ ಸೆಂಟರ್ ಆರಂಭ
ಮುಳ್ಳೇರಿಯ: ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾ ಕೇರ್ ಸೆಂಟರ್ ಆರಂಭಗೊಂಡಿತು. ಕಾರಡ್ಕ ಪಂಚಾಯತ್ ಕುಟುಂಬಶ್ರೀ ಈ ಸೆಂಟರನ್ನು ಮುನ್ನಡೆಸಲಿದೆ. ಮಕ್ಕಳಿಗೆ ಆಹಾರ, ಕೌನ್ಸಿಲಿಂಗ್, ತಿಳುವಳಿಕಾ ತರಗತಿ ಮೊದಲಾದವುಗಳು ಮಾ ಕೇರ್ ಸೆಂಟರ್ ಮೂಲಕ ಲಭಿಸುವುದು. ಆರು ಲಕ್ಷ ರೂ. ವೆಚ್ದಲ್ಲಿ ಹೈಯರ್ ಸೆಕೆಂಡರಿ ಕ್ಯಾಂಪಸ್‌ನಲ್ಲಿ ಆರಂಭಿಸಿದ ಈ ಕೇಂದ್ರವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕಾರಡ್ಕ ಪಂಚಾ ಯತ್ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ಎ.ವಿ. ಸುಧಾ, ಪಂ.ಉಪಾಧ್ಯಕ್ಷೆ ಎಂ. ಜನನಿ, ಡಿ. ಹರಿದಾಸ್, ಎಂ. ರತ್ನಾಕರ, ಪುಷ್ಪ, ವೇಣುಗೋಪಾಲ, ಎ.ಕೆ. ಅಬ್ದುಲ್ ರಹ್ಮಾನ್ ಹಾಜಿ, ತಂಬಾನ್, ಸತ್ಯವತಿ, ಪ್ರಸೀಜ, ರೂಪಸತ್ಯನ್, ಪಿಟಿಎ ಅಧ್ಯಕ್ಷ ಎಂ. ಪದ್ಮನಾಭ, ಎಸ್‌ಎಂಸಿ ಸತೀಶ್ ಕುಮಾರ್, ಪ್ರಾಂಶುಪಾಲ ಡಾ. ಕೆ. ರಿಯಾಸ್, ಮುಖ್ಯೋಪಾಧ್ಯಾಯ ಶಾಹುಲ್ ಹಮೀದ್, ಸಿವಿಎಸ್ ಅಧ್ಯಕ್ಷೆ ಸವಿತಾ ನಾರಾಯಣನ್ ಮಾತನಾಡಿದರು.