ಮೂವರು ಬಾಲಕಿಯರ ಸಹಿತ ಹೆತ್ತವರ ಮೃತದೇಹ ನಿಗೂಢ ಸ್ಥಿತಿಯಲ್ಲಿ ಪತ್ತೆ
ಲಕ್ನೋ: ಮೂವರು ಬಾಲಕಿಯರು ಹಾಗೂ ಹೆತ್ತವರ ಮೃತದೇಹಗಳು ಮನೆಯೊಳಗೆ ಕಂಡು ಬಂದಿದೆ. ಯು.ಪಿ. ಮೀರತ್‌ನ ಲಸಾರಿ ಗೇಟ್ ನಿವಾಸಿ ಮೋಯಿನ್, ಪತ್ನಿ ಅಸ್ಮ, ಮಕ್ಕಳಾದ ಅಪ್ಸಾ (8), ಅಸೀಸ (4), ಆಬಿದ (1) ಎಂಬಿವರ ಮೃತದೇಹಗಳು ಕಂಡು ಬಂದಿದ್ದು, ತಲೆ ಹೊಡೆದು ಸೀಳಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದೆ. ಮಕ್ಕಳ ಮೃತದೇಹಗಳು ಮಂಚದಲ್ಲೂ, ದಂಪತಿಯ ಮೃತದೇಹ ನೆಲದಲ್ಲೂ ಪತ್ತೆಯಾಗಿದೆ. ಇವರಲ್ಲಿ ಓರ್ವರ ಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಇತ್ತೀಚೆಗೆ ಈ ಕುಟುಂಬ ಈ ಮನೆಯಲ್ಲಿ ವಾಸ ಆರಂಭಿಸಿತ್ತು.
ಬುಧವಾರ ಬೆಳಿಗ್ಗೆ ಇವರ‍್ಯಾರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಪೋನ್ ಮೂಲಕ ಸಂಪರ್ಕಿಸಲು ನೋಡಿದರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮೊಯಿನ್‌ರ ಸಂಬಂಧಿಕರು ಮನೆಗೆ ತಲುಪಿ ನೋಡುವಾಗ ಐದು ಮೃತದೇಹಗಳು ನಿಗೂಢ ಸ್ಥಿತಿಯಲ್ಲಿ ಕಂಡು ಬಂದಿದೆ. ಮನೆಯಲ್ಲಿ ಸಾಮಗ್ರಿಗಳನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ ಸ್ಥಿತಿಯಲ್ಲಿತ್ತು. ಮನೆಯ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಗಳಾಗಿರಬೇಕು ಆಕ್ರಮಣ ನಡೆಸಿರುವುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖೆ ಆರಂಭಿಸಲಾಗಿದೆ.