ಮೃಗಾಲಯದ ಜಿಂಕೆಗೆ ಹುಚ್ಚು: ನೌಕರರಿಗೆ ಚುಚ್ಚುಮದ್ದು
ತಿರುವನಂತಪುರ: ಮೃಗಾಲಯ ದಲ್ಲಿ ಸತ್ತ ಜಿಂಕೆಗೆ ಹುಚ್ಚುಹಿಡಿ ದಿರುವುದನ್ನು ಖಚಿತಪಡಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನೌಕರರಿಗೆ ವ್ಯಾಕ್ಸಿನ್ ನೀಡಲು ತೀರ್ಮಾನಿ ಸಲಾಗಿದೆ. ನಿನ್ನೆ ಮೃಗಾಲಯದಲ್ಲಿ ನಡೆಸಿದ ಪೋಸ್ಟ್ ಮಾರ್ಟಂನಲ್ಲಿ ಹಾಗೂ ಆ ಬಳಿಕ ಸ್ಟೇಟ್ ಇನ್‌ಸ್ಟಿಟ್ಯೂಟ್ ಫಾರ್ ಎನಿಮಲ್ ಡಿಸೀಸ್ ನಡೆಸಿದ ಸಮಗ್ರ ತಪಾಸಣೆಯಲ್ಲಿ ಜಿಂಕೆಗೆ ಹುಚ್ಚು ಹಿಡಿದಿರುವುದನ್ನು ಖಚಿತಪಡಿಸಲಾ ಯಿತು. ಬಳಿಕ ಮೃಗಾಲಯದ ನಿರ್ದೇಶಕಿ ಪಿ.ಎಸ್. ಮಂಜುಳಾ ದೇವಿ ನಡೆಸಿದ ತುರ್ತು ಸಭೆಯಲ್ಲಿ ಜಿಂಕೆಯೊಂದಿಗೆ ನಿಕಟವಾಗಿ ವ್ಯವಹರಿಸುತ್ತಿದ್ದ ಎಲ್ಲಾ ನೌಕರರಿಗೂ ಪೋಸ್ಟ್ ಎಕ್ಸ್‌ಪೋಷರ್ ಆಂಟಿ ರ‍್ಯಾಬಿಟ್ ವ್ಯಾಕ್ಸಿನ್ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಈ ಜಿಂಕೆಯ ಗೂಡಿನ ಸಮೀಪವೇ ಇರುವ ಎಲ್ಲಾ ಮೃಗಗಳಿಗೂ ಆಂಟಿ ರ‍್ಯಾಬಿಸ್ ವ್ಯಾಕ್ಸಿನ್ ನೀಡಲು ಕೂಡಾ ತೀರ್ಮಾನಿ ಸಲಾಗಿದೆ. ಇಂದಿನಿಂದ ಚುಚ್ಚುಮದ್ದು ನೀಡುವ ಕ್ರಮ ಆರಂಭಗೊಂಡಿದೆ.