ಉಪ್ಪಳ: ಉಪ್ಪಳ ಸಮೀಪದ ಮೊಗವೀರ ಪಟ್ನ ಶ್ರೀ ಶಾರದಾ ಭಜನಾ ಮಂದಿರದಲ್ಲಿ ೫೬ನೇ ವಾರ್ಷಿಕ ಏಕಾಹ ಭಜನೆ ಮತ್ತು ಪುನರ್ ಪ್ರತಿಷ್ಠಾ ದಿನಾಚರಣೆ ಹಾಗೂ ಶ್ರೀ ನಾಗದೇವರ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮ ಇಂದಿನಿAದ ಆರಂಭ ಗೊಂಡಿದ್ದು ನಾಳೆ ಸಮಾಪ್ತಿಗೊಳ್ಳಲಿದೆ. ಇಂದು ಸೂರ್ಯೋದಯಕ್ಕೆ ಉಪ್ಪಳ ಶ್ರೀ ಅಯ್ಯಪ್ಪ ಭಜನಾ ಮಂದಿರದ ಎಂ.ಕುಟ್ಟಿಕೃಷ್ಣನ್ ಗುರುಸ್ವಾಮಿ ದೀಪ ಪ್ರಜ್ವಲನೆಗೊಳಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು ಬಳಿಕ ಆಶ್ಲೇಷ ಬಲಿ, ಶುದ್ದಿ ಕಲಶ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ೭ಕ್ಕೆ ದುರ್ಗಾನಮ ಸ್ಕಾರ ಪೂಜೆ, ಅನ್ನಸಂತರ್ಪಣೆ, ರಾತ್ರಿ ೧೨ಕ್ಕೆ ಮಹಾಪೂಜೆ, ೨೬ರಂದು ಸೂರ್ಯೋದಯ ೬.೫೯ಕ್ಕೆ ಮಂಗಳಾ ರತಿ, ದೀಪ ವಿಸರ್ಜನೆ, ರಾತ್ರಿ ೭ಕ್ಕೆ ಆನಂದ ಭಜನೆ ನಡೆಯಲಿದೆ.
