ಮೊಗ್ರಾಲ್‌ನಲ್ಲಿ ಮತಸೌಹಾರ್ದತೆ: ಶ್ರೀ ಕೋಡ್ದಬ್ದು ದೈವಸ್ಥಾನ ನೇಮೋತ್ಸವಕ್ಕೆ ವಲಿಯ ಜಮಾಯತ್ ಮಸೀದಿ ಸಮಿತಿಗೆ ಆಮಂತ್ರಣ
ಕಾಸರಗೋಡು: ಮೊಗ್ರಾಲ್ ಗಾಂಧಿ ನಗರ ಶ್ರೀ ಕೋಡ್ದಬ್ದು ದೈವಸ್ಥಾನದ ನೇಮೋತ್ಸವ ಈ ತಿಂಗಳ 13ರಿಂದ 16ರ ವರೆಗೆ ನಡೆಯಲಿದೆ. ಇದರಂತೆ ದೈವಸ್ಥಾನದ ಪದಾಧಿಕಾರಿಗಳು ಮಾಮೂಲಿಯಂತೆ ಈ ಬಾರಿಯೂ ಮೊಗ್ರಾಲ್ ಕಡಪ್ಪುರ ವಲಿಯ ಜಮಾಅತ್ ಮಸೀದಿಗೆ ತಲುಪಿ ನೇಮೋತ್ಸವದ ಆಮಂತ್ರಣ ನೀಡಿದರು. ಮಸೀದಿ ಬಳಿ ಇಮಾಂ ಅಬೂಬಕರ್ ಹಾಶಿಮಿ, ಜುಮಾ ಮಸೀದಿ ಕಮಿಟಿ ಪದಾಧಿಕಾರಿಗಳಾದ ವಿ.ಪಿ. ಅಬ್ದುಲ್ ಖಾದರ್ ಹಾಜಿ, ಬಿ.ಎನ್. ಮುಹಮ್ಮ ದಲಿ, ಟಿ.ಎಂ. ಶುಹೈಬ್, ಇಬ್ರಾಹಿಂ ಕೊಪ್ಪಳ, ಎಂಜಿಎ ರಹ್ಮಾನ್,, ಕಾರ್ಯ ಕಾರಿ ಸದಸ್ಯರು, ಮಹಲ್ಲ್ ನಿವಾಸಿಗಳು ಸೇರಿ ಕ್ಷೇತ್ರ ಸಮಿತಿ ಪದಾಧಿಕಾರಿಗಳನ್ನು ಸ್ವಾಗತಿಸಿದರು. ಕ್ಷೇತ್ರ ಸಮಿತಿ ಪದಾಧಿಕಾರಿಗಳಾದ ಚಿದಾನಂದ, ರಮೇಶ್ ಎಂಬಿವರಿಂದ ಜಮಾಅತ್ ಕಮಿಟಿ ಪದಾಧಿಕಾರಿಗಳು ಕಾಣಿಕೆ ಸ್ವೀಕರಿಸಿ ದರು. ಮೊಗ್ರಾಲ್‌ನಲ್ಲಿ ಶತಮಾನಗಳಿಂದ ಮತ ಸೌಹಾರ್ದತೆಯನ್ನು ಕಾಪಾಡಿ ಕೊಂಡು ಬರಲಾಗುತ್ತಿದೆ. ಜುಮಾ ಮಸೀದಿ ಉರೂಸ್ ಕಾರ್ಯಕ್ರಮಗಳಿಗೂ ಕ್ಷೇತ್ರ ಸಮಿತಿ ಪದಾಧಿಕಾರಿಗಳು ಕಾಣಿಕೆ ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಜುಮಾ ಮಸೀದಿ ಸಮಿತಿ ಪದಾಧಿಕಾರಿಗಳು ಕಾಣಿಕೆ ನೀಡಿ ಸಹಕರಿಸುತ್ತಿದ್ದಾರೆ.